ಕಾರವಾರ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಭಾರತ ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ, ಉತ್ತರ ಕನ್ನಡ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರವಾರ, ಅಲಿಮ್ಕೋ ಮತ್ತು ಸಿಎಸ್ಆರ್ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಎ.ಡಿ.ಐ.ಪಿ ಮತ್ತು ಆರ್.ವಿ.ವಾಯ್ ಯೋಜನೆಯಡಿ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಅವಶ್ಯವಿರುವ ಸಾಧನ ಸಲಕರಣೆಗಳ ಶಿಬಿರವನ್ನು ಸೆ.17 ರಂದು ಜಿಲ್ಲಾ ಆಸ್ಪತ್ರೆ ಕಾರವಾರದಲ್ಲಿ, ಸೆ.18 ರಂದು ತಾಲೂಕಾ ಆಸ್ಪತ್ರೆ ಅಂಕೋಲಾ, ಸೆ. 19 ರಂದು ತಾಲೂಕಾ ಆಸ್ಪತ್ರೆ ಕುಮಟಾ, ಸೆ. 20 ರಂದು ತಾಲೂಕಾ ಆಸ್ಪತೆ ಹೊನ್ನಾವರ, ಸೆ. 21 ರಂದು ತಾಲೂಕಾ ಆಸ್ಪತ್ರೆ ಭಟ್ಕಳ, ಸೆ.23 ರಂದು ತಾಲೂಕಾ ಆಸ್ಪತ್ರೆ ಶಿರಸಿ, ಸೆ. 24 ರಂದು ತಾಲೂಕಾ ಆಸ್ಪತ್ರೆ ಸಿದ್ಧಾಪುರ, ಸೆ. 25 ರಂದು ತಾಲೂಕಾ ಆಸ್ಪತ್ರೆ ಯಲ್ಲಾಪುರ, ಸೆ 26 ರಂದು ತಾಲೂಕಾ ಆಸ್ಪತ್ರೆ ಮುಂಡಗೋಡ, ಸೆ. 27 ರಂದು ತಾಲೂಕಾ ಆಸ್ಪತ್ರೆ ಹಳಿಯಾಳ, ಸೆ. 28 ರಂದು ತಾಲೂಕಾ ಆಸ್ಪತ್ರೆ ದಾಂಡೇಲಿ, ಸೆ.30 ರಂದು ತಾಲೂಕಾ ಆಸ್ಪತ್ರೆಯ ಜೋಯಿಡಾ ದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲೆಯ ಎಲ್ಲಾ ತಾಲೂಕಿನ ವಿಕಲಚೇತನರು ಅವಶ್ಯವಿರುವ ಸಾಧನ ಸಲಕರಣೆಗಳ ಶಿಬಿರಕ್ಕೆ ಆಧಾರ ಕಾರ್ಡ, ರೇಷನ್ ಕಾರ್ಡ, ಯುಡಿಐಡಿ ಕಾರ್ಡ ಮತ್ತು ಫೋಟೊ ಈ ಎಲ್ಲಾ ದಾಖಲಾತಿಗಳನ್ನು ಹಾಗೂ ಹಿರಿಯ ನಾಗರಿಕರು ಆಧಾರ ಕಾರ್ಡ, ರೇಷನ್ ಕಾರ್ಡ, ಮತ್ತು ಫೋಟೊ ಈ ಎಲ್ಲಾ ದಾಖಲಾತಿಗಳನ್ನು ತರಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕಾರವಾರ ಕಚೇರಿಯನ್ನು ಸಂಪರ್ಕಿಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.