Slide
Slide
Slide
previous arrow
next arrow

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ದಾಂಡೇಲಿಯ ದಂಡಕಾರಣ್ಯ ಇಕೋ ಪಾರ್ಕ್

300x250 AD

– ಸಂದೇಶ್ ಎಸ್.ಜೈನ್, ದಾಂಡೇಲಿ

ದಾಂಡೇಲಿ : ನಗರದ ಪ್ರವಾಸೋದ್ಯಮ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ನಗರದ ಕೇಂದ್ರ ಬಸ್ ನಿಲ್ದಾಣದ ಕೂಗಳತೆಯ ದೂರದಲ್ಲಿರುವ ದಂಡಕಾರಣ್ಯ ಇಕೋ ಪಾರ್ಕ್ ಪ್ರವಾಸಿಗರಿಲ್ಲದೆ ಬಿಕೋ ಎನ್ನತೊಡಗಿದೆ.

300x250 AD

ಮಳೆಗಾಲ ಆರಂಭವಾದಾಗಿನಿಂದ ಪ್ರವಾಸಿಗರ ಸಂಖ್ಯೆ ವ್ಯಾಪಕವಾಗಿ ಕಡಿಮೆಯಾಗಿರುವುದ್ದು, ದಂಡಕಾರಣ್ಯ ಇಕೋ ಪಾರ್ಕ್ ವೀಕ್ಷಣೆಗೆ ಜನರೇ ಬರದಂತಾಗಿದೆ. ಇನ್ನೂ ಒಂದು ಕಡೆ ಗಣೇಶಗುಡಿಯಲ್ಲಿ ರಾಫ್ಟಿಂಗ್ ಸೇರಿದಂತೆ ವಿವಿಧ ಜಲ ಸಾಹಸ ಕ್ರೀಡೆಗಳನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿರುವುದರಿಂದ ದಾಂಡೇಲಿಯತ್ತ ಪ್ರವಾಸಿಗರು ಮುಖ ಮಾಡದೆ ತಿಂಗಳು ಮೂರು ಕಳೆದಿದೆ. ಪ್ರವಾಸೋದ್ಯಮಕ್ಕೆ ಜೀವಕಳೆಯನ್ನು ತಂದಿರುವ ರಾಪ್ಟಿಂಗ್ ಸ್ಥಗಿತಗೊಂಡಿರುವುದರಿಂದ ಪ್ರವಾಸೋದ್ಯಮ ಇದೀಗ ನೆಲಕಚ್ಚಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ದಂಡಕಾರಣ್ಯ ಇಕೋ ಪಾರ್ಕ್ ಜನರ ಓಡಾಟವಿಲ್ಲದೆ ಬಿಕೋ ಪಾರ್ಕ್ ಎಂಬಂತಾಗಿದೆ.

Share This
300x250 AD
300x250 AD
300x250 AD
Back to top