Slide
Slide
Slide
previous arrow
next arrow

ಹತ್ತು ಅಡಿ ಉದ್ದದ ಮೊಸಳೆ ಪ್ರತ್ಯಕ್ಷ: ಅರಣ್ಯ ಇಲಾಖೆಯಿಂದ ರಕ್ಷಣೆ

300x250 AD

ದಾಂಡೇಲಿ : ತಾಲೂಕಿನ ಅಂಬಿಕಾನಗರದಲ್ಲಿ ಸ್ಥಳೀಯ ಕೆಪಿಸಿಯ ಗ್ಯಾರೇಜಿನಲ್ಲಿ 10 ಅಡಿ ಉದ್ದದ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಈ ಬಗ್ಗೆ ಕೆಪಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದಾರೆ.

ಅರಣ್ಯ ಇಲಾಖೆಯ ನುರಿತ ರಕ್ಷಣಾ ತಂಡ ಸ್ಥಳಕ್ಕಾಗಮಿಸಿ ಮೊಸಳೆಯನ್ನು ಸುರಕ್ಷಿತವಾಗಿ ಹಿಡಿದು ಸ್ಥಳಾಂತರಗೊಳಿಸಿದೆ.

300x250 AD

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಕುಮಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚೌವ್ಹಾಣ್ ಅವರ ಮಾರ್ಗದರ್ಶನದಲ್ಲಿ ವಲಯಾರಣ್ಯಾಧಿಕಾರಿಗಳಾದ ಎನ್.ಎಲ್.ನದಾಫ್‌ ಮತ್ತು ಮಹಿಮ್ ಜನ್ನು ಅವರ ನೇತೃತ್ವದಲ್ಲಿ ಅಸ್ಲಾಂ, ರಾಜಶೇಖರ, ಲಗ್ಮಪ್ಪಾ, ಹಸನ್ ಹಾಗೂ ದಾಂಡೇಲಿ‌ಯ ಮೊಸಳೆ ರೆಸ್ಕ್ಯೂ ತಂಡ  ಈ ಕಾರ್ಯದಲ್ಲಿ ಭಾಗವಹಿಸಿತ್ತು.

Share This
300x250 AD
300x250 AD
300x250 AD
Back to top