ಯಲ್ಲಾಪುರ: ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿ ಭಾನುವಾರ ಶಿರಲೆ ಬಳಿ ಪಲ್ಟಿಯಾಗಿದೆ.
ಹಳಿಯಾಳದ ಗುತ್ತಿಗೇರಿಗಲ್ಲಿಯ ಜಾವೀದ್ ಹಳಿಯಾಳಕರ ಎಂಬಾತ ಈ ಲಾರಿ ಓಡಿಸುತ್ತಿದ್ದ. ಘಟ್ಟಪ್ರದೇಶದಲ್ಲಿಯೂ ವೇಗವಾಗಿ ಲಾರಿ ಓಡಿಸಿಕೊಂಡು ಬಂದ ಈತ ಶಿರಲೆ ಬಳಿ ನಿಯಂತ್ರಣ ಕಳೆದುಕೊಂಡಿದ್ದು, ವಾಹನ ಪಲ್ಟಿಯಾಗಿದೆ. ಇದರಿಂದ ಚಾಲಕನಿಗೆ ಗಾಯವಾಗಿದೆ.
ಈ ಲಾರಿ ಯಲ್ಲಾಪುರದ ಕಾಳಮ್ಮನಗರದ ರಶೀದಖಾನ್ ನಿಸಾರಖಾನ್ ಮಧ್ನಳ್ಳಿ ಅವರಿಗೆ ಸೇರಿದ್ದಾಗಿದೆ. ಲಾರಿ ಪೂರ್ಣ ಪ್ರಮಾಣದಲ್ಲಿ ಜಖಂ ಆಗಿದ್ದು, ರಶೀದ ಖಾನ್ ಅವರು ಪೊಲೀಸ್ ದೂರು ನೀಡಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ
