ಶಿರಸಿ: ಜಿಲ್ಲಾದ್ಯಂತ ಅರಣ್ಯವಾಸಿಗಳನ್ನ ಅನಧಿಕೃತ ಒತ್ತುವರಿ ಭೂಮಿಯಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆ ಇಲಾಖೆಯಿಂದ ಜರುಗುತ್ತಿದ್ದು, ಅಸಮರ್ಪಕ ಮತ್ತು ಕಾನೂನುಬಾಹೀರವಾಗಿ ಒಕ್ಕಲೆಬ್ಬಿಸುವ ವಿಚಾರಣೆ ಜರಗುತ್ತಿದೆ. ಈ ಕುರಿತು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ವಿಷಾದ ವ್ಯಕ್ತಪಡಿಸಿದ್ದಾರೆ.
ಶಿರಸಿ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಪ್ರಾಧಿಕಾರದಿಂದ ಒಕ್ಕಲೆಬ್ಬಿಸುವ ವಿಚಾರಣೆ ನೋಟಿಸ್ ಬಂದಿರುವುದನ್ನು ಪರಿಶೀಲಿಸಿ ಮೇಲಿನಂತೆ ಮೇಲಿನಂತೆ ಹೇಳಿದರು.
ವಿಚಾರಣೆಗೆ ಹಾಜರಾಗಲು ನೀಡಿದ ನೋಟಿಸಿನ ಅವಧಿ, ವಿಚಾರಣೆ ಸಮಯಕ್ಕೆ ವಿಚಾರಣೆ ಜರುಗಿಸದೇ ಅರಣ್ಯವಾಸಿಗಳಿಗೆ ಕಾಯಿಸುವದು, ನೋಟಿಸಿನಲ್ಲಿ ಇಂಗ್ಲಿಷ್ ಶಬ್ದಗಳಿಂದ ಕೂಡಿರುವುದು, ವಿಚಾರಣೆಗೆ ಹಾಜರಾಗಲು ಸೂಚಿಸಿದ ನೋಟಿಸಿನಲ್ಲಿ ವಿಚಾರಣೆಗೆ ಸಂಬಂಧಿಸಿದ ಪ್ರಮುಖ ಅಂಶ ಪ್ರಸ್ತಾಪಿಸದೇ ಇರುವದು, ಕಾನೂನಿನಲ್ಲಿ ಅವಕಾಶವಿಲ್ಲದ ವ್ಯಕ್ತಿಯು ಪ್ರಕರಣ ದಾಖಲಿಸಿರುವುದು ಮುಂತಾದ ನ್ಯೂನತೆಯಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆ ಜರುಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಲಾಗುತ್ತದೆ ಎಂದು ಅವರು ಹೇಳಿದರು.
ಕಾನೂನು ಪಾಲನೆ ಮಾಡದ ಅಧಿಕಾರಿಗಳು:
ಒಕ್ಕಲೆಬ್ಬಿಸುವ ವಿಚಾರಣೆ ಮತ್ತು ಅತಿಕ್ರಮಣದಾರರ ಮೇಲೆ ದಾಖಲಾದ ಪ್ರಕರಣ ಅರಣ್ಯ ಅತಿಕ್ರಮಣದಾರರ ಮೇಲೆ ದಾಖಲಿಸುವ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಕನಿಷ್ಠ ಕಾನೂನು ಪಾಲನೆ ಅನುಸರಿಸದೆ ಇರುವುದು ಕರ್ತವ್ಯ ಚ್ಯೂತಿಗೆ ಕಾರಣವಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.