Slide
Slide
Slide
previous arrow
next arrow

ಧಾರ್ಮಿಕ ಕಾರ್ಯಕ್ರಮ ಆಚರಣೆಯಿಂದ ಊರಿನ ಸಂಘಟನೆ, ಅಭಿವೃದ್ಧಿ ಸಾಧ್ಯ: ಉಪೇಂದ್ರ ಪೈ

300x250 AD

ಸಿದ್ದಾಪುರ: ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಶೃದ್ಧಾಭಕ್ತಿಯಿಂದ ಆಚರಿಸಬೇಕು. ಇದರಿಂದ ಊರಿನಲ್ಲಿ ಸಂಘಟನೆಯ ಜತೆಗೆ ಅಭಿವೃದ್ಧಿಯೂ ಆಗುತ್ತದೆ. ಯಕ್ಷಗಾನವೂ ನಮ್ಮ ನಾಡಿನ ಸಂಸ್ಕೃತಿ, ಕಲೆಯನ್ನು ತಿಳಿಸುವಂತಹುದು ಎಂದು ಉದ್ಯಮಿ ಉಪೇಂದ್ರ ಪೈ ಶಿರಸಿ ಹೇಳಿದರು.

ತಾಲೂಕಿನ ಆಲ್ಮನೆ, ಗದ್ದೆಮನೆ ಶ್ರೀ ಗಣೇಶೋತ್ಸವ ಯುವಕ ಸಮಿತಿಯ ಸ್ನೇಹಿತರ ಸಮ್ಮಿಲನದಿ ಚಪ್ಪರಮನೆ-ಆಲ್ಮನೆ ಕಿರಿಯ ಪ್ರಾಥಮಿಕ ಶಾಲಾ ಆವರಣದ ಬಾಲಗಂಗಾಧರ ತಿಲಕ್ ರಂಗವೇದಿಕೆಯಲ್ಲಿ ಆಯೋಜಿಸಿರುವ 17ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾನುವಾರ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯಕ್ಷಗಾನ ಕಲಾವಿದರನ್ನು ಹಾಗೂ ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಪರಿಪಾಠ ನಮ್ಮದಾಗಬೇಕು ಎಂದು ಹೇಳಿದರು.

ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಮಾತನಾಡಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಗೌರವಿಸಿರುವುದು ಶ್ಲಾಘನೀಯವಾದ್ದು. ಅದರಲ್ಲಿಯೂ ಯೋಧರರನ್ನು ಗೌರವಿಸಿರುವುದು ಸಮಯೋಚಿತವಾಗಿದೆ. ನಮ್ಮ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲರದ್ದಾಗಿದೆ ಎಂದು ಹೇಳಿದರು.

300x250 AD

ಗೌರವ ಸನ್ಮಾನ: ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ಯಕ್ಷಗಾನ ಕಲಾವಿದ ಎನ್.ಜಿ. ಹೆಗಡೆ ಬೊಗರಿಮಕ್ಕಿ, ಯೋಧ ನವೀನ ರಾಮ ನಾಯ್ಕ ಶಿರಗಳ್ಳೆ, ಬಿಳಗಿಯ ಶ್ರೀರಾಮ ರೈಸ್ ಮಿಲ್ ಮಾಲೀಕ ದೇವಿದಾಸ ಎಸ್.ಪೈ ಇವರಿಗೆ ಗೌರವ ಸನ್ಮಾನ ಹಾಗೂ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ಸೀಮಾ ವಿನಾಯಕ ಭಟ್ಟ ಹೆಬ್ಕುಳಿ ಇವಳಿಗೆ ವಿನಯ ಪುಸ್ಕಾರ ನೀಡಿ ಗೌರವಿಸಲಾಯಿತು. ಗೌರವ ಸನ್ಮಾನ ಸ್ವೀಕರಿಸಿ ಎನ್.ಜಿ.ಹೆಗಡೆ ಬೊಗರಿಮಕ್ಕಿ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಬಿಳಗಿ ಗ್ರಾಪಂ ಸದಸ್ಯ ಆದರ್ಶ ಎನ್.ಪೈ, ಹರೀಶ ಎಂ.ನಾಯ್ಕ ಸರ್ನಕೈ, ಯುವಕ ಸಮಿತಿಯ ರವೀಂದ್ರ ಹೆಗಡೆ, ಗಜಾನನ ಹೆಗಡೆ, ವಿನಾಯಕ ಹೆಗಡೆ, ವಿ.ಆರ್.ಗೌಡ ಇತರರಿದ್ದರು.

ನಂತರ ಯಕ್ಷರಾಘವ ಜನ್ಸಾಲೆ ಪ್ರತಿಷ್ಠಾನ ಇವರಿಂದ ವೀರಬರ್ಭರೀಕ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ, ಸುನೀಲ ಭಂಡಾರಿ, ಸುಜನ್ ಹಾಲಾಡಿ ಸಹಕರಿಸಿದರು. ಮುಮ್ಮೇಳದಲ್ಲಿ ಉದಯ ಹೆಗಡೆ ಕಡಬಾಳ, ವಿನಯ ಬೇರೊಳ್ಳಿ, ನಿರಂಜನ ಜಾಗನಳ್ಳಿ, ಕಾರ್ತಿಕ ಕಣ್ಣಿ, ಸುಧೀರ ಉಪ್ಪೂರು, ದರ್ಶನ ಭಟ್ಟ, ಸಂತೋಷ ಕುಲಾಲ್, ಪುರಂದರ ಮೂಡ್ಕಣಿ ಇವರು ವಿವಿಧ ಪಾತ್ರ ನಿರ್ವಹಿಸಿ ಮೆಚ್ಚುಗೆಗಳಿಸಿದರು.ಯುವಕ ಸಮಿತಿಯ ಗಿರೀಶ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಸದಸ್ಯರುಗಳು ಸಹಕರಿಸಿದರು.

Share This
300x250 AD
300x250 AD
300x250 AD
Back to top