Slide
Slide
Slide
previous arrow
next arrow

ವಿಘ್ನನಿವಾರಕ ಇಡಗುಂಜಿ ಗಣಪತಿ ಸನ್ನಿಧಾನಕ್ಕೆ ಹರಿದು ಬಂದ ಭಕ್ತಸಾಗರ

300x250 AD

ಹೊನ್ನಾವರ : ತಾಲೂಕಿನ ಪುರಾಣ ಪ್ರಸಿದ್ಧ ಇಡಗುಂಜಿ ಶ್ರೀ ಮಹಾಗಣಪತಿ ಸನ್ನಿಧಿಯಲ್ಲಿ ಗಣೇಶ ಚತುರ್ಥಿ ಹಿನ್ನಲೆಯಲ್ಲಿ ಶನಿವಾರ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿ ವಿಘ್ನ ವಿನಾಶಕ ವಿಘ್ನೇಶ್ವರನಲ್ಲಿ ಪ್ರಾರ್ಥಿಸಿದರು.

ಗಣೇಶ ಚೌತಿಯ ದಿನದಂದು ಪ್ರತಿ ವರ್ಷ ರಾಜ್ಯದ ಮೂಲೆ ಮೂಲೆಯಿಂದ ೫೦ ಸಾವಿರಕ್ಕೂ ಹೆಚ್ಚಿನ ಭಕ್ತರು ಶ್ರೀ ಕ್ಷೇತ್ರ ಇಡಗುಂಜಿಗೆ ಭೇಟಿ ನೀಡಿ ದರ್ಶನ ಪಡೆದು ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಭಾತ ಕಾಲದಿಂದಲೇ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಬೆಳಗಿನಜಾವ 4 ಗಂಟೆಗೆ ದೇವರ ದರ್ಶನಕ್ಕೆ ಭಕ್ತಾಧಿಗಳು ಆಗಮಿಸಿದ್ದರು. ಶ್ರೀ ಕ್ಷೇತ್ರದಲ್ಲಿ ಗಣಹೋಮ, ಮಂಗಳಾರತಿ, ಸತ್ಯಗಣಪತಿ ವ್ರತ, ಫಲ ಪಂಚಾಮೃತ ಅಭಿಷೇಕ ಹಾಗೂ ಪಂಚಕಜ್ಜಾಯ ಸೇವೆಗಳು ಒಳಗೊಂಡಂತೆ ಕ್ಷೇತ್ರದಲ್ಲಿ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪರಂಪರಾಗತವಾಗಿ ನಡೆದುಬಂದ ಎಲ್ಲಾ ಸಂಪ್ರದಾಯಗಳು ನಡೆದವು.

100 ಕ್ವಿಂಟಾಲ್ ನಷ್ಟು ಪಂಚಕಜ್ಜಾಯ ನೈವೇದ್ಯವಾಗಿತ್ತು. 40 ಸಾವಿರ ತೆಂಗಿನಕಾಯಿ ಸಮರ್ಪಣೆಯಾಗಿದೆ. 250 ಕ್ಕೂ ಹೆಚ್ಚು ಗಣಹೋಮ ಸತ್ಯಗಣಪತಿ ವೃತ ನಡೆದಿದೆ.

300x250 AD

ವಿಘ್ನಗಳ ದೂರ ಮಾಡುವ ಶ್ರೀ ಮಹಾಗಣಪತಿಯು ವಿಶ್ವಕ್ಕೆ ಬಂದಂತಹ ವಿಪತ್ತು, ಸಂಕಷ್ಟವನ್ನು ದೂರಮಾಡಲಿ ಎಂದು ದೇವಾಲಯದ ಭಜಕರು ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಿದರು. ಬೆಳಿಗ್ಗೆ ಶ್ರೀ ಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸಿದ ಕಾರಣ ಎರಡು ಕಿಲೋಮೀಟರ್ ವರೆಗೂ ಜನಸಂದಣಿ ಉಂಟಾಯಿತು. ವರುಣ ಅಬ್ಬರಿಸಿದ್ದರಿಂದ ಕೆಲಕಾಲ ಭಕ್ತಾಧಿಗಳು ಮಳೆಯಲ್ಲಿ ನೆನೆಯುವಂತಾಯಿತು. ಸರತಿ ಸಾಲಿನ ಪ್ರಕಾರ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಪೊಲೀಸರು ಪರಿಸ್ಥಿತಿ ನಿಬಾಯಿಸುವಲ್ಲಿ ಹರಸಾಹಸಪಟ್ಟರು. ಭಕ್ತರು ಸರದಿ ಸಾಲಿನಲ್ಲಿ ನಿಂತು ಸಂಕಷ್ಟಹರ ಗಣಪನ ದರ್ಶನ ಪಡೆದು ಪುನಿತರಾದರು. ಮಧ್ಯಾಹ್ನ 3 ಗಂಟೆಯ ನಂತರ ಭಕ್ತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಯಿತು.

ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕರಾದ ವಿದ್ವಾನ್ ವಿಷ್ಣು ಭಟ್ಟ ರವರು ಮಾತನಾಡಿ ದುಷ್ಟ ಶಕ್ತಿಗಳನ್ನು ನಾಶ ಮಾಡಲಿಕ್ಕೆ ಗಣಪತಿಯ ಅವತಾರವಾಗಿದೆ, ಚೌತಿಯ ದಿನದಂದು ಮಣ್ಣಿನ ಗಣಪತಿಯ ಪೂಜೆ ಮಾಡುವುದರಿಂದ ಸಂಪೂರ್ಣ ಅನುಗ್ರಹವಾಗುತ್ತದೆ, ಚೌತಿ ಚಂದ್ರನ ನೋಡಿದರೆ ಏನು ಮಾಡಬೇಕು ಎಂದು ಮಾಹಿತಿ ನೀಡಿದರು.

Share This
300x250 AD
300x250 AD
300x250 AD
Back to top