Slide
Slide
Slide
previous arrow
next arrow

ದಾಂಡೇಲಿಯಲ್ಲಿ ಪುಗುಡಿ ನೃತ್ಯದ ಗಣಪನ ಆರಾಧನೆ

300x250 AD

ಮರಾಠಿ ಸಮುದಾಯದ ಜಾನಪದ ನೃತ್ಯದ ಕಲರವ

ವರದಿ : ಸಂದೇಶ್ ಎಸ್.ಜೈನ್

ದಾಂಡೇಲಿ : ಹಿಂದೂ ಧರ್ಮಿಯರ ಸಂಭ್ರಮ, ಸಡಗರದ ಹಬ್ಬಗಳಲ್ಲಿ ಅಗ್ರಣೀಯ ಸ್ಥಾನದಲ್ಲಿರುವ ಚೌತಿ ಹಬ್ಬವನ್ನು ದಾಂಡೇಲಿಯ ಹಿಂದೂ ಬಾಂಧವರ ಮನೆ ಮನೆಗಳಲ್ಲಿ ಶೃದ್ದಾಭಕ್ತಿಯಿಂದ ಆಚರಿಸಲಾಗುತ್ತಿದೆ. ನಗರದ ಬಹುತೇಕ ಹಿಂದೂ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಮಣ್ಣಿನ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜಿಸುತ್ತಿದ್ದಾರೆ. ಗಣೇಶನ ಪ್ರತಿಷ್ಟಾಪನೆಯ ಬಳಿಕ ವಿವಿಧ ಪೂಜಾರಾಧನೆಗಳ ಜೊತೆಗೆ ಭಜನೆ, ಗುಮುಟೆ ಭಜನೆಯ‌ ಮೂಲಕವು ಗಣಪನನ್ನು ಭಕ್ತಿ ಭಾವದಿಂದ ಸ್ತುತಿಸಲಾಗುತ್ತದೆ.

300x250 AD

ನಗರ ಸಭೆಯ ಕಂದಾಯ ಅಧಿಕಾರಿ ಬಾಳು ಗವಾಸ ಹಾಗೂ ಯುವ ಗುತ್ತಿಗೆದಾರ ಪ್ರದೀಪ ಗವಾಸ ಅವರ ಗಾಂಧಿನಗರದಲ್ಲಿರುವ ಮನೆಯಲ್ಲಿ ಗಣೇಶ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಇಲ್ಲಿ ಪುಗುಡಿ ನೃತ್ಯದ ಮೂಲಕ ಗಣಪತಿಯನ್ನು ಆರಾಧನೆ ಮಾಡಲಾಗುತ್ತಿರುವುದು ವಿಶೇಷ.

ಮಹಾರಾಷ್ಟ್ರದ ಜನಪದ ಕಲೆಯಾದ ಪುಗುಡಿ ನೃತ್ಯವನ್ನು ಮರಾಠಾ ಸಮುದಾಯದವರು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಚೌತಿಯ ಮೊದಲ ದಿನವಾದ ಶನಿವಾರ ಸಂಜೆ ಬಾಳು ಗವಾಸ ಅವರ ತಾಯಿ ಯಶೋಧಾ ಗವಾಸ ಅವರ ನೇತೃತ್ವದಲ್ಲಿ ಸಾವಿತ್ರಿ ಗವಾಸ್, ಪ್ರಿಯ ಗವಾಸ, ಪ್ರೀತಿ ಗವಾಸ, ರೂಪಾ ಪರಬ, ತೃಪ್ತಿ ಪರಬ, ಸ್ವರ ಗವಾಸ, ಜ್ಯೋತಿ ತಾಂಬುಡಾ ಅವರುಗಳು ಸೇರಿ ಪುಗುಡಿ ನೃತ್ಯದ ಮೂಲಕ ಗಣೇಶನ ಆರಾಧನೆಯಲ್ಲಿ ತಮ್ಮನ್ನು ತಾವು ಭಕ್ತಿಭಾವದಿಂದ ತೊಡಗಿಸಿಕೊಂಡರು. ಮಣ್ಣಿನ ಕೊಡಗಳ ಮೂಲಕ ಪುಗುಡಿ ನೃತ್ಯ ಮಾಡಲಾಗುತ್ತಿದೆಯಾದರೂ ಇತ್ತೀಚಿನ ದಿನಗಳಲ್ಲಿ ಮಣ್ಣಿನ ಕೊಡಗಳ ಅಭಾವವಿರುವುದರಿಂದ ಅನಾದಿಕಾಲದಿಂದ ಬಂದ ಜನಪದ ಕಲೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯವ ದೃಷ್ಟಿಯಿಂದ ಈ ನೃತ್ಯವನ್ನು ಭಕ್ತಿಯಿಂದ ಮಾಡಿಕೊಂಡು ಬರಲಾಗುತ್ತಿರುವುದು ಇಲ್ಲಿಯ ವಿಶೇಷ.

Share This
300x250 AD
300x250 AD
300x250 AD
Back to top