ಅಂಕೋಲಾ: ತಾಲೂಕಿನ ಶಿರೂರು ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಬೆಳಸೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ ವಿದ್ಯಾ ಎಸ್. ಲಮಾಣಿ 400ಮೀ ಓಟ ಪ್ರಥಮ, ಶಿವಾನಿ ಎಸ್. ಹುಣಸೇಮರದ 200ಮೀ ಓಟ ಪ್ರಥಮ, ಲಲಿತಾ ವಡ್ಡರ್ 600ಮೀ ಓಟ ಪ್ರಥಮ, ವೈಷ್ಣವಿ ಪಿ. ಗೌಡ 600ಮೀ ಓಟ ದ್ವಿತೀಯ, ಖುಷಿ ಎಸ್. ನಾಯ್ಕ 100ಮೀ ಓಟ ತೃತೀಯ, ಅಮೃತಾ ಹಾವನೂರ ಗುಂಡು ಎಸೆತದಲ್ಲಿ ತೃತೀಯ, ಕಬ್ಬಡ್ಡಿ ಮತ್ತು ಖೋಖೋ ಪ್ರಥಮ, 4*100ಮೀ ರಿಲೇ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಚೆಸ್ ಸ್ಪರ್ಧೆಯಲ್ಲಿ ಸಹನಾ ರಾಥೋಡ ಪ್ರಥಮ, ಲೇಖನಾ ಎಸ್. ಹರಿಕಾಂತ ಉದ್ದ ಜಿಗಿತ ಮತ್ತು 400ಮೀ ಓಟದಲ್ಲಿ ದ್ವಿತೀಯ, ಹಾಗೂ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಅಲ್ಲದೇ ತಾಲೂಕಾ ಮಟ್ಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಹರ್ಷಿಣಿ ನಾಯಕ ಯೋಗಾಸನದಲ್ಲಿ ಪ್ರಥಮ, ಹಾಗೂ ದೀಪಿಕಾ ನಾಯ್ಕ ತಾಲೂಕಾ ಮಟ್ಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಪ್ರೌಢ ಶಾಲಾ ವಿಭಾಗದಲ್ಲಿ ಸ್ನೇಹಾ ಜಾಡರ್ ಜಾವಲಿನ್ ಎಸೆತದಲ್ಲಿ ದ್ವಿತೀಯ, ಗೌರಮ್ಮ ಗೊರನವರ 3000ಮೀ ಓಟದಲ್ಲಿ ದ್ವಿತೀಯ, ಚಂದನಾ ಗೌಡ 1500ಮೀ & 400ಮೀ ಓಟದಲ್ಲಿ ತೃತೀಯ, ಸುಪ್ರಿತಾ ಎಸ್. ಆಗೇರ ಉದ್ದ ಜಿಗಿತ ತೃತೀಯ, ಕಬ್ಬಡ್ಡಿ ಪ್ರಥಮ, ಖೋಖೋ ದ್ವಿತೀಯ, ಚೆಸ್ ಹರ್ಷಿತಾ ಗೌಡ, ರೂಪಿಕಾ ದೇವಾಡಿಗ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಚೈತನ್ಯಾ ಗೌಡ ತಾಲೂಕಾ ಮಟ್ಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಯೋಗಾಸನ ಬಿ.ವಿ. ನಮನ ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ನಿಸರ್ಗಾ ನಾಯ್ಕ ತಾಲೂಕಾ ಮಟ್ಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.
ಕ್ರೀಡಾ ಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಕ ಲಕ್ಷö್ಮಣ ಗೌಡ ರವರಿಗೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.