Slide
Slide
Slide
previous arrow
next arrow

ಭತ್ತದ ಗದ್ದೆಗಳಿಗೆ ಕಾಡುಕೋಣ ದಾಳಿ

300x250 AD

ಸಿದ್ದಾಪುರ: ತಾಲೂಕಿನ ಜಾನ್ಮನೆ ವಲಯ ಅರಣ್ಯ ವ್ಯಾಪ್ತಿಯ ಹೆಗ್ಗರಣಿ ಸಮೀಪದ ಕೆರೆಗದ್ದೆ ಸುತ್ತಮುತ್ತ ಕಾಡುಕೋಣಗಳು ನಾಟಿ ಮಾಡಿದ ಗದ್ದೆಗಳಿಗೆ ಧಾವಿಸಿ ಬೆಳೆಯನ್ನು ನಾಶಪಡಿಸುತ್ತಿದೆ.

ಕೆರೆಗದ್ದೆಯ ವೆಂಕಟರಮಣ ಶಿವರಾಮ ಹೆಗಡೆ, ಗಣಪತಿ ವಿಶ್ವೇಶ್ವರ ಹೆಗಡೆ ಇವರ ಗದ್ದೆಗಳಿಗೆ ಏಳೆಂಟು ಕಾಡುಕೋಣಗಳ ಹಿಂಡು ದಾಳಿ ನಡೆಸಿ ಸುಮಾರು ಎರಡು ಏಕರೆ ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಸಶಿಗಳನ್ನು ನಾಶಮಾಡಿದೆ. ಕಳೆದ ಆರೇಳು ದಿನದಿಂದ ಗದ್ದೆಗಳಿಗೆ ದಾಳಿನಡೆಸುತ್ತಿರುವ ಕಾಡುಕೋಣಗಳನ್ನು ರಾತ್ರಿ ಓಡಿಸುವುದೇ ಆಗಿದೆ. ಆದರೆ ಪುನಃ ಗದ್ದೆಗಳಿಗೆ ಬರುತ್ತದೆ ಎಂದು ಗಣಪತಿ ಹೆಗಡೆ ಹಾಗೂ ವೆಂಕಟರಮಣ ಹೆಗಡೆ ತಿಳಿಸಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಗಮನ ಹರಿಸಿ ಗದ್ದೆಗಳಿಗೆ ದಾವಿಸಿ ಬೆಳೆ ಹಾನಿಮಾಡುತ್ತಿರುವ ಕಾಡುಕೋಣಗಳನ್ನು ಅಡವಿಗೆ ಓಡಿಸುವುದಕ್ಕೆ ಮುಂದಾಗಬೇಕು ಹಾಗೂ ಬೆಳೆ ಹಾನಿಯನ್ನು ನೀಡುವುದಕ್ಕೆ ಮುಂದಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top