ಸಿದ್ದಾಪುರ: ಇತ್ತೀಚೆಗೆ ಶಿವಮೊಗ್ಗದ ಪ್ರೇರಣಾ ಸಭಾಂಗಣದಲ್ಲಿ ನಡೆದ 5ನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಸಿದ್ದಾಪುರ ತಾಲೂಕಿನ ಬಿಳಗಿಯ ಸನ್ಮಿತ್ ಆರ್. ಹತ್ತು ವರ್ಷದೊಳಗಿನ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮತ್ತು ಕುಮತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿಪದಕವನ್ನು ಪಡೆದುಕೊಂಡಿದ್ದಾನೆ. ಈತನು ಬಿಳಗಿಯ ರಮಾನಂದ ಮಡಿವಾಳ ಹಾಗೂ ರೇಖಾ ರಮಾನಂದ ಮಡಿವಾಳ ದಂಪತಿ ಪುತ್ರ.
ಕರಾಟೆ ಚಾಂಪಿಯನ್‌ಶಿಪ್: ಬಿಳಗಿಯ ಸನ್ಮಿತ್ ಸಾಧನೆ
