ಶಿರಸಿ : ನಗರದ ರಾಘವೇಂದ್ರ ಮಠದಲ್ಲಿ ಶ್ರೀಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಜನನಿ ಮ್ಯೂಸಿಕ್ ಸಂಸ್ಥೆ ಶಿರಸಿ ಆಯೋಜಿಸಿದ್ದ “ಶ್ರೀಕೃಷ್ಣ ಗಾನಾಮೃತ” ಅತ್ಯಂತ ಭಕ್ತಿ ಪ್ರಧಾನವಾಗಿ ಮೂಡಿ ಬಂತು.
ಕಾರ್ಯಕ್ರಮವನ್ನು ಶ್ರೀ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಿ.ಡಿ. ಮಾಡಗೇರಿ ಹಾಗೂ ಪ್ರಧಾನ ಅರ್ಚಕರಾದ ಸುಬ್ಬಣ್ಣ ಆಚಾರ್ಯ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ನಂತರ ನಡೆದ ಗಾನಾಮೃತದಲ್ಲಿ ಜನನಿ ಮ್ಯೂಸಿಕನ ಪ್ರಾಚಾರ್ಯೆ ವಿದೂಷಿ ರೇಖಾ ದಿನೇಶ ರವರು ಹಾಡುತ್ತ ಆರಂಭಿಕವಾಗಿ ರಾಗ್ ಮಧುಕಂಸದಲ್ಲಿ ಮೊರಾಮನ ಲೂಬಾಯಾ ಸಾವರಿಯಾ ಎಂಬ ಛೋಟಾ ಖ್ಯಾಲ್ ಪ್ರಸ್ತುತ ಗೊಳಿಸಿದರು. ಪ್ರತಿಯೊಂದು ಹಾಡನ್ನು ಭಗವಾನ ಕೃಷ್ಣ ಕುರಿತಾಗಿ ಛೋಟಾಖ್ಯಾಲ್‌ನಲ್ಲಿ ಪ್ರಸ್ತುತಗೊಳಿಸುತ್ತ ಪುರಂದರ ದಾಸರ ಕೃತಿ ಕಂಡೆನಾ ಗೋವಿಂದನಾ ಹಾಡು ನಂತರ ರಾಘವೇಂದ್ರ ಸ್ವಾಮಿಗಳ ಕುರಿತಾಗಿ ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯಾ ಹಾಗೂ ಎನಿದು ಕೌತುಕ ಫಂಡರಿಯನೆ ಬಿಟ್ಟು ಹಾಡಿ ಯಾಸ ಸಾಟಿಯಾ ಕೆಲಾ ಹೋತಾ ಎಂಬ ಮರಾಠಿ ಅಭಂಗ ಪ್ರಸ್ತುತ ಗೊಳಿಸಿದರು. ಕೊನೆಯಲ್ಲಿ ರಾಗ್ ಭೈರವಿಯಲ್ಲಿ ಕಂಗೊಳಿದ್ಯಾತಕೋ ಮತ್ತು ಸಾಹಿತ್ಯ ಪೂರ್ಣವಾದ ತಂಬೂರಿ ಮೀಟಿದವ ಹಾಡುಗಳನ್ನು ಹಾಡಿದರು. ರೇಖಾರವರ ಗಾನಕ್ಕೆ ಮುರಳಿಯ ನಾದದಲ್ಲಿ ಪ್ರತಿಯೊಂದು ಹಾಡಿಗೆ ಸೊಗಸಾಗಿ ಕೊಳಲು ನುಡಿಸಿ ಇನ್ನಷ್ಟು ಮೆರಗು ತಂದವರು ಕಲ್ಲಾರೆಮನೆಯ ಪ್ರಕಾಶ ಹೆಗಡೆ ಮತ್ತು ಹಾರ್ಮೊನಿಯಂನಲ್ಲಿ ಸತೀಶ ಭಟ್ಟ ಹೆಗ್ಗಾರ, ತಬಲಾದಲ್ಲಿ ಗಣೇಶ ಗುಂಡ್ಕಲ್ ಹಾಗೂ ರಿದಮ್ ಪ್ಯಾಡ್‌ನಲ್ಲಿ ಉದಯ ಭಂಡಾರಿ, ಹಿನ್ನಲೆಯ ತಾನ್ಪುರಾದಲ್ಲಿ ಸ್ನೇಹಾ ಅಮ್ಮಿನಳ್ಳಿ, ಮಾನಸ ಹೆಗಡೆ ಸಹಕರಿಸಿದರು.
ವಿದೂಷಿ ರೇಖಾ ಗಾನಾಮೃತದ ಪೂರ್ವದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಹಾಗೂ ಸಮಾಜದ ಸಾಮಾಜಿಕ ಕೆಲಸ ಕಾರ್ಯದಲ್ಲಿ ತೊಡಗಿಕೊಂಡ ಗಣೇಶ ಕೂರ್ಸೆ, ಪ್ರಭಾಕರ ಹೆಗಡೆ, ಗಣೇಶ ಹೆಗಡೆ, ದಿನೇಶ ಭಾಗ್ವತ, ರಾಘವೇಂದ್ರ ಸಕಲಾತಿ, ಅಮೀತ ಹಿರೇಮಠ, ಡಾ| ವಿಕ್ರಮ ರವರು ಗ್ರೂಪ್ ಸಾಂಗ್ ಮೂಲಕ ಹಾಗೂ ಮಹಿಳಾ ಗ್ರೂಪ್ ನಲ್ಲಿ ರೇಖಾ ಭಟ್ಟ ನಾಡಗುಳಿ, ಪ್ರಥ್ವಿ ಹೆಗಡೆ, ಚೈತ್ರಾ ಹೆಗಡೆ, ಆಶಾ ಕೆರೆಗದ್ದೆ, ರೇಷ್ಮಾ ಶೆಟ್ ರವರುಗಳು ಕ್ರಮವಾಗಿ ತುಂಗಾ ತೀರದಿ, ಹರಿ ಕುಣಿದ, ರಥವನೇರಿದ, ರಾಘವೇಂದ್ರ, ಮಾಝೆ ಮಾಹೇರ ಪಂಡರಿ ಹೀಗೆ ಭಕ್ತಿ ಪ್ರಧಾನ ಜನಪ್ರಿಯ ಹಾಡುಗಳನ್ನು ಹಾಡಿ ಕಿಕ್ಕಿರಿದ ಸಭೆಯ ಕರತಾಡನಕ್ಕೆ ಭಾಜನರಾದರು.
ಇವರ ಗಾನಕ್ಕೆ ಹಾರ್ಮೊನಿಯಂನಲ್ಲಿ ಸತೀಶ ಹೆಗ್ಗಾರ, ತಬಲಾದಲ್ಲಿ ಗಣೇಶ ಗುಂಡ್ಕಲ್ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಜನನಿ ಸಂಸ್ಥೆಯ ಭೂಮಿ ದಿನೇಶ ವಿಶೇಷವಾಗಿ ಕರ್ನಾಟಕಿ ಸಂಗೀತದ ಶೈಲಿಯಲ್ಲಿ ಜಗದೋದ್ಧಾರನ, ಹಾಗೂ ವರಹಾರೂಪಂ ಹಾಡನ್ನು ಸುಂದರವಾಗಿ ಹಾಡಿ ಸೈ ಎನಿಸಿಕೊಂಡರು.
ನಂತರ ನಡೆದ ಗಾನಮೃತದಲ್ಲಿ ಸಂಸ್ಥೆಯ ಸಿನಿಯರ್ ವಿದ್ಯಾರ್ಥಿಗಳಾದ ಸ್ನೇಹಾ ಅಮ್ಮಿನಳ್ಳಿ ತೊರೆದು ಜೀವಿಸಬಹುದೇ ಹಾಗೂ ಮಾನಸ ಹೆಗಡೆ ಪೂರ್ವಜನ್ಮದ ಮತ್ತು ಸಂಪದಾ ಹೆಗಡೆ ಹಾಡುಗಳನ್ನು ಗಾನಾಮೃತದಲ್ಲಿ ಹಾಡಿದರು. ಹಾರ್ಮೋನಿಯಂನಲ್ಲಿ ವಿ. ರೇಖಾ ದಿನೇಶ, ತಬಲಾದಲ್ಲಿ ರಾಮದಾಸ ಭಟ್ ಕಿರಣಕಾನಗೋಡ ಸಾಥ್ ನೀಡಿದರು. ಎಂದು ಕಾಂಬೆನು ಮತ್ತು ಒಲಿದೆ ಯಾತಕಮ್ಮ ಲಕುಮಿ ಹಾಡಿನಲ್ಲಿ ಸುಪರ್ಣಾ ನಾಗರಾಜ್, ಶೈಲಾ, ಸುಮನಾ, ಡಾ|| ಪೂರ್ಣಿಮಾ, ಲತಾ, ಸ್ನೇಹಾ, ಅರ್ಚನಾ, ಶರಧಿ, ರೇಖಾ ರವರು ಭಕ್ತಿಯಿಂದ ಹಾಡಿದರು.
ಏಸುಕಾರ್ಯಂಗಳ ಹಾಡಿನಲ್ಲಿ ವೈಷ್ಣವಿ, ಸಿಂಧು, ಸ್ವಾತಿ, ಚೈತನ್ಯ ಪೈ ಪಾಲ್ಗೊಂಡರೆ ಜಯ ಜನಾರ್ಧನ ಹಾಡಿನಲ್ಲಿ ಭೂಮಿಕಾ, ಚೈತನ್ಯ, ಧೃತಿ, ಮಾಧುರಿ, ಹಾಗೂ ಎನಗೂ ಆಣೆ ರಂಗಾ ಹಾಡಿನಲ್ಲಿ ಮೇಧಿನಿ, ಡಾ|| ವಾಣಿ, ಮಮತಾ, ಮಾನ್ಯಾ, ಮಂಗಳಗೌರಿ, ಸಮೀಕ್ಷಾ ಪಾಲ್ಗೊಂಡು ಸುಂದರವಾಗಿ ಹಾಡಿದರು. ಶ್ರೀನಿಕೇತನಾ ಹಾಡಿನಲ್ಲಿ ನೇಹಾ, ಸಾಕ್ಷಿ, ಸನ್ನಿಧಿ, ಚಿನ್ಮಯಿ, ವಿಭಾ ಮತ್ತು ಇಷ್ಟುದಿನ ಈ ವೈಕುಂಠ ಹಾಡಿನಲ್ಲಿ ಶ್ರೀಶಾ, ರಜತ್, ಶ್ರೀಹಾನ್, ಪಾಲ್ಗೊಂಡರು. ಶ್ರೀಕೃಷ್ಣ ಗೋವಿಂಧ ಹರೇ ಹಾಡಿನಲ್ಲಿ ಸುಜಯ್, ಚಿನ್ಮಯ್ ಭಟ್, ಚಿನ್ಮಯ ಕೆರೆಗದ್ದೆ ಹಾಗೂ ಕೃಷ್ಣ ಜನಾರ್ಧನ ಹಾಡಿನಲ್ಲಿ ಸಾದ್ವಿ, ವಾಗ್ದೇವಿ ಪಾಲ್ಗೊಂಡು ಒಟ್ಟಾರೆ ಕೃಷ್ಣ ಗಾನಾಮೃತಕ್ಕೆ ಮೆರಗು ನೀಡಿದರು.
ಜನನಿ ಸಂಸ್ಥೆಯ ಮುಖ್ಯಸ್ಥ ದಿನೇಶ ಹೆಗಡೆ ಸ್ವಾಗತಿಸಿದರೆ ಗಿರಿಧರ ಕಬ್ನಳ್ಳಿ ಹಾಗೂ ಉಪನ್ಯಾಸಕಿ, ಸುಮನಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.