Slide
Slide
Slide
previous arrow
next arrow

ಕಾಂಗ್ರೇಸ್ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿಯಾಗಿ ಡಾ. ಅಂಜಲಿ ನಿಂಬಾಳ್ಕರ್

300x250 AD

ಶಿರಸಿ : ಅಖಿಲ ಭಾರತೀಯ ಕಾಂಗ್ರೇಸ್ ಸಮಿತಿಯ ಕಾರ್ಯದರ್ಶಿಯಾಗಿ (ಎ.ಐ.ಸಿ.ಸಿ.)ಗೆ ಖಾನಾಪುರದ ಮಾಜಿ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳ್ಕರ ಅವರನ್ನು ನೇಮಿಸಿರುತ್ತಾರೆ ಎಂದು ಜಿಲ್ಲಾ ಕಾಂಗ್ರೇಸ ಸಮಿತಿಯ ಇಂಟೆಕ್ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ವಿ. ಪಾಟೀಲ್ ತಿಳಿಸಿದ್ದಾರೆ.

ಇವರನ್ನು ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ಹಾಗೂ ರಾಷ್ಟ್ರೀಯ ನಾಯಕರುಗಳಾದ ಕೆ.ಸಿ. ವಿ.ಎನ್. ಗೋಪಾಲ ಮತ್ತು ಕರ್ನಾಟಕದ ಕಾಂಗ್ರೇಸ್ ಉಸ್ತುವಾರಿಗಳಾದ ರಣದೀಪ ಸುರ್ಜೆವಾಲಾ ಅವರುಗಳು ಇವರಿಗೆ ಕಾಂಗ್ರೇಸ ಪಕ್ಷದ ಎ.ಐ.ಸಿ.ಸಿ. ಗೆ ಕಾರ್ಯದರ್ಶಿ ಹುದ್ದೆಯನ್ನು ನೀಡಿ ಪಕ್ಷದ ಸಂಘಟನೆಗೆ ಅವಕಾಶವನ್ನು ನೀಡಿದ್ದಾರೆ. ಇದರೊಂದಿಗೆ ಗೋವಾ, ದಾದ್ರಾ ನಗರ ಹವೇಲಿ, ದಮನ, ದಿಯು ರಾಜ್ಯದಲ್ಲಿ ಕಾಂಗ್ರೇಸ ಪಕ್ಷದ ಉಸ್ತುವಾರಿಯನ್ನು ಸಹ ನೀಡಿದ್ದಾರೆಂದು ಪಾಂಡುರಂಗ ಪಾಟೀಲ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿದ ಡಾ. ಅಂಜಲಿ ನಿಂಬಾಳ್ಕರ ರವರು ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನವನ್ನು ನೀಡಿದ್ದಾರೆ.


ಪತ್ರಕರ್ತರೊಂದಿಗೆ ದರ್ಪ ತೋರಿದ ಪೋಲೀಸ್ ಅಧಿಕಾರಿ ನಡೆಗೆ ಖಂಡನೆ

300x250 AD

ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಜನಪರ ಹೋರಾಟಗಾರರು, ಪತ್ರಕರ್ತರೂ ಆದ ಬಿ.ಎನ್. ವಾಸರೆ ಹಾಗೂ ದಾಂಡೇಲಿಯ ಹಲವು ಪತ್ರಕರ್ತರ ಮೇಲೆ ದರ್ಪದಿಂದ ವರ್ತಿಸಿ ಬೆದರಿಕೆ ಹಾಕಿದ ದಾಂಡೇಲಿಯ ಸಿ.ಪಿ.ಐ. ಭೀಮಣ್ಣ ಸೂರಿಯ ನಡೆಯನ್ನು ತೀವ್ರವಾಗಿ ಖಂಡಿಸಿ ಇವರ ಮೇಲೆ ಶಿಸ್ತುಕ್ರಮ ಜರುಗಿಸುವಂತೆ ರಾಜ್ಯದ ಗೃಹ ಸಚಿವರಾದ ಜಿ.ಟಿ. ಪರಮೇಶ್ವರಪ್ಪ ರವರಿಗೆ ಮನವಿಯನ್ನು ನೀಡಿ ಆಗ್ರಹಿಸಲಾಗುವುದು ಎಂದು ತಿಳಿಸಿದ ಇವರು ಪತ್ರಕರ್ತರಿಗೆ ಬರೆಯಲು ಹಾಗೂ ಅನ್ಯಾಯದ ವಿರೋಧಿಸಲು ಸಂವಿಧಾನಬದ್ಧ ಹಕ್ಕಿದೆ. ಹೀಗಿರುವಾಗ ಜವಾಬ್ದಾರಿ ಸ್ಥಾನದಲ್ಲಿರುವ ಸಿ.ಪಿ.ಐ. ಭೀಮಣ್ಣ ಎಂ. ಸೂರಿಯವರು ಅಧಿಕಾರದ ದರ್ಪ ತೋರಿಸಿ ಪತ್ರಕರ್ತರನ್ನು ಎಳೆದಾಡಿ ಏರುಧ್ವನಿಯಲ್ಲಿ ಬೈದಾಡಿರುವುದು ಬೇಸರದ ಘಟನೆಯಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತಾ ಅವರ ವಿರುದ್ಧ ಶೀಘ್ರದಲ್ಲೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಕಾಂಗ್ರೇಸ ಸಮಿತಿಯ ಇಂಟೆಕ್ ವಿಭಾಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಕ್ಷತ್ರೀಯ ಮರಾಠ ಸಮುದಾಯದ ಮುಖಂಡ ಪಾಂಡುರಂಗ ವಿ. ಪಾಟೀಲ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top