ಶಿರಸಿ: ಇಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ಟಿಎಸ್ಎಸ್ ವಿಶೇಷಾಧಿಕಾರಿ ನೇಮಕಕ್ಕೆ ಸಂಬಂಧಿಸಿ ಬೆಳಗಾವಿ ಸಹಕಾರ ಸಂಘಗಳ ಸಂಯುಕ್ತ ನಿಬಂಧಕರು ನೀಡಿದ ಆದೇಶಕ್ಕೆ ಧಾರವಾಡದ ಕರ್ನಾಟಕ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಆ.20, 2023ರಂದು ನಡೆದ ಟಿಎಸ್ಎಸ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಲೋಪಗಳು ನಡೆದಿವೆ ಎಂದು ಕೆಲ ಸದಸ್ಯರು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಕಾರವಾರ ನ್ಯಾಯಾಲಯವು ಚುನಾವಣೆಯಲ್ಲಿ ಲೋಪ ನಡೆದಿರುವುದನ್ನು ಪರಿಶೀಲಿಸಿ, ಮರು ಚುನಾವಣೆ ನಡೆಸಲು ಆದೇಶಿಸುವುದರ ಜೊತೆ ವಿಶೇಷ ಆಡಳಿತಾಧಿಕಾರಿಯನ್ನು ನೇಮಿಸಿತ್ತು. ಈ ಸಂಬಂಧ ಬೆಳಗಾವಿ ಸಹಕಾರ ಸಂಘ ಸಂಯುಕ್ತ ನಿಬಂಧಕರ ಪೀಠ ಆಡಳಿತಾಧಿಕಾರಿ ನೇಮಕವನ್ನು ರದ್ದುಗೊಳಿಸಿ ಆದೇಶ ನೀಡಿತ್ತು. ಇದೀಗ ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠ ತಡೆಯಾಜ್ಞೆ ನೀಡಿದ್ದು, ಟಿಎಸ್ಎಸ್ನ ಹಾಲಿ ಆಡಳಿತ ಮಂಡಳಿಗೆ ಹಿನ್ನಡೆಯಾಗಿದೆ. ಆ ಮೂಲಕ ಹಾಲಿ ಆಡಳಿತ ಮಂಡಳಿ ವಿರುದ್ಧ ಸಂಘದ ಶೇರು ಸದಸ್ಯರು ಸಲ್ಲಿಸಿದ್ದ ಅರ್ಜಿಗೆ ಪುರಸ್ಕಾರ ದೊರೆತಂತಾಗಿದೆ.