ಹೊನ್ನಾವರ: ಸಂಸ್ಕೃತ ಭಾಷೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಸಂಸ್ಕೃತ ದೇವಭಾಷೆ. ಸರಳ ಭಾಷೆ, ಪ್ರಾಚೀನ ಹಾಗೂ ಸುಂದರ ಭಾಷೆ. ಸಂಸ್ಕೃತ ಭಾಷೆಯ ಮಹತ್ವ ,ಅದನ್ನು ಯಾಕೆ ಕಲಿಯಬೇಕು. ಎಂಬುದರ ಕುರಿತು ಶ್ರೀ ರಾಘವೇಶ್ವರ ಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ವಿ.ಜಿ.ಹೆಗಡೆ ಗುಡ್ಗೆ ಮಾತನಾಡಿದರು. ಅವರು ಕೊಳಗದ್ದೆಯ ಶ್ರೀ ಸಿದ್ಧಿವಿನಾಯಕ ವಿವಿಧೋದ್ದೇಶ ವಿದ್ಯಾ ಪ್ರಸಾರ ಮಂಡಳಿ ಇದರ ಅಂಗಸಂಸ್ಥೆಗಳಾದ ಸಂಸ್ಕೃತ ಪಾಠಶಾಲೆ, ಆಂಗ್ಲ ಮಾದ್ಯಮ ವತಿಯಿಂದ ಸಂಸ್ಕೃತ ಭಾರತಿ ,ಕರ್ಣಾಟಕ ಉತ್ತರಂ ಸಂಸ್ಕೃತ ಸಪ್ತಾಹ ಇದರ ನಿಮಿತ್ತ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾದ್ಯಮ ಶಾಲೆಯ ಸಭಾಭವನದಲ್ಲಿ ನಡೆದ ಅಸ್ಮಾಕಂ ಸಂಸ್ಕೃತಮ್ – ಸಂಸ್ಕೃತೋತ್ಸವಃ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಸಂಸ್ಕೃತ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಮ್ಮ ಸನಾತನ ಸಂಸ್ಕೃತಿ , ಭಗವದ್ಗೀತೆ , ಸುಭಾಷಿತಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆ ಕಲಿಯಲು ಆಸಕ್ತಿ ಬೆಳೆಸಲು ಪ್ರೇರೇಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯ ಮಹೇಶ್ ಹೆಗಡೆ ಮಾತನಾಡಿ ಎಲ್ಲಾ ಭಾಷೆಗಳನ್ನು ಬೆಳೆಸಿದಂತೆ ಸಂಸ್ಕೃತ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದರು. ಶ್ರೀ ಸಿದ್ಧಿವಿನಾಯಕ ವಿವಿಧೋದ್ದೇಶ ವಿದ್ಯಾಪ್ರಸಾರ ಮಂಡಳಿ ನಿರ್ದೇಶಕ ಕೃಷ್ಣಮೂರ್ತಿ ಭಟ್, ಶಿವಾನಿ ಶುಭ ಹಾರೈಸಿದರು. ಸಂಸ್ಕೃತ ಪಾಠಶಾಲೆಯ ಮುಖ್ಯೋಪಾಧ್ಯಾಯ ಗಣೇಶ್ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕುಮಾರಿ ಬಿಂದು ನಾಯ್ಕ ಸ್ವಾಗತಿಸಿದಳು. ಕುಮಾರಿ ಪ್ರತೀಕ್ಷಾ ಭಟ್ ಪ್ರಾರ್ಥಿಸಿದಳು.ಕುಮಾರಿ ಸಿಂಚನಾ ಭಂಡಾರಿ ನಿರೂಪಿಸಿದಳು. ಶಿಕ್ಷಕ ರಾಕೇಶ್ ವಿ.ಎಚ್ ವಂದಿಸಿದರು. ಆಂಗ್ಲ ಮಾದ್ಯಮ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮ ಸಂಪೂರ್ಣವಾಗಿ ಸಂಸ್ಕೃತದಲ್ಲಿಯೇ ನಡೆದಿದ್ದು ವಿಶೇಷವಾಗಿತ್ತು.