Slide
Slide
Slide
previous arrow
next arrow

ಕ್ರೀಡಾಕೂಟ: ಚಂದನ ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ

300x250 AD

ಶಿರಸಿ: ಆ.26 ಮತ್ತು 27ರಂದು ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಬಿಸಲಕೊಪ್ಪ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟದಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಅಮೋಘ ಪ್ರದರ್ಶನ ನೀಡಿ ಬಿಸಲಕೊಪ್ಪ ವಲಯದ 7 ಪ್ರೌಢಶಾಲೆಗಳಲ್ಲಿ ಅತ್ಯಧಿಕ ಅಂಕ ಪಡೆದು ಸಮಗ್ರ ವೀರಾಗ್ರಣಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

10ನೇ ತರಗತಿಯ ಅಮೋಘ ಟಿ.ನಾಯ್ಕ್ 400 ಮೀಟರ್ ಓಟ ಹಾಗೂ 800 ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 9ನೇ ತರಗತಿಯ ವೇಣುಗೋಪಾಲ್ ಹೆಗಡೆ ಎತ್ತರ ಜಿಗಿತ‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ. 10ನೇ ತರಗತಿಯ ಅನಿರುದ್ಧ ಹೆಗಡೆ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 10ನೇ ತರಗತಿಯ ಸಚೇತ್ ಹೆಗಡೆ 100 ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 10ನೇ ತರಗತಿಯ ವಸುಂಧರಾ ಹೆಗಡೆ 400 ಮೀಟರ್ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ,800 ಮೀಟರ್ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ,8ನೇ ತರಗತಿಯ ಧನ್ಯಾ ಹೆಗಡೆ 3000 ಮೀಟರ್ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, 8ನೇ ತರಗತಿಯ ಸಿಂಚನ ನಾಯ್ಕ ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ 10ನೇ ತರಗತಿಯ ಪ್ರಣತಿ ಜಿ.ವಿ ಚಕ್ರ ಎಸೆತ ಸ್ಪರ್ಧೆಯಲ್ಲಿ ದ್ವಿತೀಯ 9ನೇ ತರಗತಿಯ ದೀಪ್ತಿ ಹೆಗಡೆ ಹರ್ಡಲ್ಸ್ ಸ್ಪರ್ಧೆಯಲ್ಲಿ ಪ್ರಥಮ, 8ನೇ ತರಗತಿಯ ಸಾಕ್ಷಿ ಹೆಗಡೆ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ಪ್ರಥಮ, 8ನೇ ತರಗತಿಯ ಸುಜಲಾ ಹೆಗಡೆ ಹ್ಯಾಮರ್ ಥ್ರೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

8ನೇ ತರಗತಿಯ ಅಕ್ಷರಾ ನಾಯ್ಕ್ 200 ಮೀಟರ್ ಓಟ ಸ್ಪರ್ಧೆಯಲ್ಲಿ ತೃತೀಯ, 10ನೇ ತರಗತಿಯ ಸೃಜನ್ ನಾಯ್ಕ್ 400 ಮೀಟರ್ ಓಟ ಸ್ಪರ್ಧೆಯಲ್ಲಿ ತೃತೀಯ, 10ನೇ ತರಗತಿಯ ಗಗನದೀಪ 1500 ಮೀಟರ್ ಓಟ ಸ್ಪರ್ಧೆಯಲ್ಲಿ ತೃತೀಯ, 10ನೇ ತರಗತಿಯ ಅಭಿನವ ಹೆಗಡೆ ಚಕ್ರ ಎಸೆತ ಸ್ಪರ್ಧೆಯಲ್ಲಿ ತೃತೀಯ,10ನೇ ತರಗತಿಯ ಸಚೆತ್ ಹೆಗಡೆ 400ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ತೃತೀಯ, 9ನೇ ತರಗತಿಯ ಸಾಧನ ಆಚಾರಿ ಚಕ್ರ ಎಸೆತ ಸ್ಪರ್ಧೆಯಲ್ಲಿ ತೃತೀಯ 10ನೇ ತರಗತಿಯ ಸ್ವಾತಿ ಶಿವನಂಚಿ ಜವಲಿನ್ ಥ್ರೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.

300x250 AD

ಗುಂಪು ಆಟಗಳಲ್ಲಿ ಗಂಡು ಮಕ್ಕಳ 4*100 ರಿಲೇ , ವಾಲಿಬಾಲ್, ಥ್ರೋಬಾಲ್, ಹೆಣ್ಣು ಮಕ್ಕಳ 4*400 ರಿಲೇ, ವಾಲಿಬಾಲ್, ಥ್ರೋ ಬಾಲ್
ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗಂಡು ಮಕ್ಕಳ 4*400 ರಿಲೇ, ಬಾಲ್ ಬ್ಯಾಡ್ಮಿಂಟನ್, ಹೆಣ್ಣು ಮಕ್ಕಳ 4*100 ರೀಲೆ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿ, ಶುಭ ಹಾರೈಸಿದ್ದಾರೆ.

Share This
300x250 AD
300x250 AD
300x250 AD
Back to top