Slide
Slide
Slide
previous arrow
next arrow

ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಕ್ರೀಡಾ ಹವ್ಯಾಸ ಬೆಳೆಸಿಕೊಳ್ಳಬೇಕು: ಆರ್.ಎಮ್. ಹೆಗಡೆ

300x250 AD

ಸಿದ್ದಾಪುರ: ಕ್ರೀಡೆ ಎನ್ನುವುದು ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿದ್ದು ವಿದ್ಯಾರ್ಥಿಗಳು ಮೊಬೈಲ್ ವ್ಯಸನಿಗಳಾಗದೆ ಹೊರಾಂಗಣ ಕ್ರೀಡೆಗಳನ್ನು ರೂಢಿಸಿಕೊಂಡಲ್ಲಿ ಬೌದ್ಧಿಕವಾಗಿಯೂ ಪ್ರಬಲರಾಗಲು ಸಾಧ್ಯ ಎಂದು ಟಿ.ಎಮ್.ಎಸ್. ಅಧ್ಯಕ್ಷ ಆರ್.ಎಮ್ ಹೆಗಡೆ ಬಾಳೆಸರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ಹಳ್ಳಿಬೈಲ್ ಪ್ರೌಢಶಾಲಾ ಆವರಣದಲ್ಲಿ ಬಿಳಗಿ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ  ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದರು. ಸೋವಿನಕೊಪ್ಪ ಗ್ರಾ.ಪಂ. ಅಧ್ಯಕ್ಷೆ ಸುಮಾ ಗೌಡ ಕಿಲವಳ್ಳಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ, ಗ್ರಾ.ಪಂ. ಉಪಾಧ್ಯಕ್ಷ ಗಿರೀಶ ಶೇಟ್, ಕ್ಯಾದಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಮ್.ಜಿ .ನಾಯ್ಕ, ಟಿಎಸ್ಎಸ್ ನಿರ್ದೇಶಕಿ ವಸುಮತಿ ಭಟ್ಟ,  ಪ್ರೌಢಶಾಲಾ ಸಂಸ್ಥಾಪಕ ಅಧ್ಯಕ್ಷ ಸೀತಾರಾಮ ಭಟ್ಟ ಗ್ರಾ.ಪಂ. ಸದಸ್ಯರುಗಳಾದ ರವಿ ನಾಯ್ಕ, ಮೋಹನ ಗೌಡ, ಕಲಾವತಿ ಹರಿಜನ, ರಾಧಾ ವೆಂಕಟರಮಣ ಗೌಡ, ಗಣಪತಿ ಜೆ. ಗೌಡ, ಸುರೇಖಾ ಎಸ್ ನಾಯ್ಕ,ಭವಾನಿ ಹರಿಜನ, ಎಸ್ ಡಿ .ಎಮ್. ಸಿ. ನಾಮನಿರ್ದೇಶಿತ ಸದಸ್ಯ ಗಣಪತಿ ಭಟ್ಟ ಜಾತಕ,  ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಮ್.ವಿ. ನಾಯ್ಕ, ವಲಯದ ಪ್ರೌಢಶಾಲಾ ಮುಖ್ಯಾಧ್ಯಾಪಕ ಆರ್.ಎಚ್. ಪಾಲೇಕರ, ಡಿ.ಜಿ. ಪೂಜಾರ, ಎಫ್,ಎನ್, ಹರನಗಿರಿ, ವಿನಾಯಕ ಪಟಗಾರ, ರೋನಿ ಗೊನ್ಸಾಲಿಸ್, ವಿ.ಕೆ. ವೈದ್ಯ,  ಎಸ್ ಡಿ.ಎಮ್. ಸಿ. ಪದಾಧಿಕಾರಿಗಳು ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಎಸ್ ಡಿ .ಎಮ್.ಸಿ ಅಧ್ಯಕ್ಷ ನರಹರಿ ಗೌಡ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯಾಧ್ಯಾಪಕ ಚೈತನ್ಯಕುಮಾರ ಕೆ. ಎಮ್.  ಸ್ವಾಗತಿಸಿದರು.  

 ದೈ.ಶಿ.ಶಿಕ್ಷಕರಾದ ಗೋಪಾಲ ನಾಯ್ಕ ಲಂಬಾಪುರ,  ಪ್ರಕಾಶ ಹಿತ್ಲಕೊಪ್ಪ  ದೊಡ್ಮನೆ  ಧ್ವಜಾರೋಹಣ ನಿರ್ವಹಣೆ ಮಾಡಿದರೆ,  ಪಿ.ಟಿ ವಾಲ್ಮಿಕಿ ಹಾಗೂ ಎಂ.ಆರ್. ಗೌಡ ವಿದ್ಯಾರ್ಥಿಗಳೊಂದಿಗೆ ಕ್ರೀಡಾಜ್ಯೋತಿ ಕರೆತಂದರು. ದೈ.ಶಿಕ್ಷಕ ವಿನಾಯಕ ನಾಯ್ಕ ಪ್ರತಿಜ್ಞಾವಿಧಿ ಬೋಧಿಸಿದರು.

 ಕುಮಾರಿ ಚಿನ್ಮಯಿ ನಾಯ್ಕ ಸಂಗಡಿಗರು ಪ್ರಾರ್ಥನೆ, ನಾಡ ಗೀತೆ ಹಾಡಿದರು. ಶಿಕ್ಷಕರಾದ ಗಣೇಶ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ನಾಯ್ಕ, ಪ್ರಶಾಂತ ಖಟಾವಕರ, ಅಪರ್ಣಾ ಶಾಸ್ತ್ರಿ, ಕೀರ್ತಿ ಹೆಗಡೆ, ಲಲಿತಾ ವಂದಿಗೆ ನಿರ್ವಹಣೆ ಮಾಡಿದರು. ಹಿರಿಯ ಶಿಕ್ಷಕ ಚಂದ್ರಶೇಖರ ನಾಯ್ಕ ವಂದನಾರ್ಪಣೆ ಮಾಡಿದರು.

300x250 AD

Share This
300x250 AD
300x250 AD
300x250 AD
Back to top