ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕಷ್ಟ ಪರಿಸ್ಥಿತಿಯಲ್ಲಿರುವ ಕುಸ್ತಿ ಹಾಗೂ ಕುಸ್ತಿಯೇತರ ಕ್ರೀಡಾಪಟುಗಳಿಗೆ ಮಾನದಂಡಗಳನ್ನಾಧರಿಸಿ ಸರ್ಕಾರವು ನಿಗದಿಪಡಿಸಿರುವ ಮಾಶಾಸನವನ್ನು ಮಂಜೂರು ಮಾಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಕ್ರೀಡಾಪಟುಗಳು ಆ.31 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಮಾನದಂಡಗಳು: ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಬೇಕು, ಕುಸ್ತಿ ಹಾಗೂ ಕುಸ್ತಿಯೇತರ ಕ್ರೀಡಾಪಟುಗಳ ವಯಸ್ಸು 50 ವರ್ಷ ಪೂರೈಸಿರಬೇಕು, ತಾಲೂಕಿನ ತಹಶೀಲ್ದಾರರಿಂದ ಆದಾಯ ಪ್ರ,ಮಾಣ ಪತ್ರವನ್ನು ನಿಗದಿತ ನಮೂನೆ-ಎಫ್ ರಲ್ಲಿ ಸಲ್ಲಿಸುವುದು (ಆದಾಯದ ಮೀತಿ ರೂ.20,000 ಮೀರಿರಬಾರದು), ಪೈಲ್ವಾನರುಗಳ ಅರ್ಹತೆ: ಪೋಸ್ಟರ್, ಬ್ಯಾನರ್, ಹ್ಯಾಂಡ್ ಬಿಲ್ಸ್, ಆಮಂತ್ರಣ ಪತ್ರಿಕೆಗಳ ಹಾಗೂ ಪದಕಗಳನ್ನು ಆಧಾರವಾಗಿ ಪರಿಗಣಿಸಲು ಅವಕಾಶವಿರುತ್ತದೆ (ದೃಢೀಕತ ದಾಖಲೆಗಳು), ವಯೋಮಾನ ದೃಢೀಕರಣ ಪ್ರತಿಗಳಾದ ಆಧಾರ ಕಾರ್ಡ್, ಪಾನ್ ಕಾರ್ಡ್, ಶಾಲಾ ದಾಖಲಾತಿ ನಕಲು ಹಾಗೂ ಇನ್ನಿತರೆ ದಾಖಲಾತಿಗಳನ್ನು ದೃಢೀಕರಿಸಿ ಸಲ್ಲಿಸುವುದು, ವಾಸ ಸ್ಥಳ ದೃಢೀಕರಣ ಪತ್ರ (ಹುಟ್ಟಿನಿಂದ ಕರ್ನಾಟಕದಾವರು ಎಂಬ ಬಗ್ಗೆ ಕಂದಾಯ ಅಧಿಕಾರಿಗಳಿಂದ ಸಮರ್ಥನಾ ಪತ್ರ ಲಗತ್ತಿಸಬೇಕು, ಪಾಸ್ ಪೋರ್ಟ್ ಅಳತೆಯ ಮೂರು ಭಾವಚಿತ್ರಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ರುಜು ಹಾಕಿಸಿ ಲಗತ್ತಿಸಬೇಕು, ಸ್ಥಳ ಪರಿಶೀಲನಾ ವರದಿ, ಸ್ಥಳ ಹೇಳಿಕೆ ಪತ್ರ, ದೈಹಿಕವಾಗಿ ಸದೃಡತೆ ಹೊಂದಿರುವ ಬಗ್ಗೆ ವೈದ್ಯೆರಿಂದ ಪಡೆದ ಪ್ರಮಾಣ ಪತ್ರ, ಸರ್ಕಾರದ ಯೋಜನೆಯಾದ ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಯಡಿ ಯಾವುದೇ ಪಿಂಚಣಿ ಸೌಲಭ್ಯ ಪಡೆದಿರುವುದಿಲ್ಲ ಎಂದು ತಹಶೀಲ್ದಾರರಿಂದ ಇತ್ತೀಚಿಗೆ ಪಡೆದ ದೃಢೀಕರಣ ಪತ್ರ ಸಲ್ಲಿಸಬೇಕು.
ಅರ್ಜಿ ನಮೂನೆ ,ಮಾರ್ಗಸೂಚಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂಖ್ಯೆ:Tel:+919480886551,Tel:+919945489193 ನ್ನು ಕಚೇರಿಯ ವೇಳೆಯಲ್ಲಿ ಸಂಪರ್ಕಿಸುವಂತೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.