Slide
Slide
Slide
previous arrow
next arrow

ಸಂಪೂರ್ಣ ತೆರವಾಗದ ಗುಡ್ಡಕುಸಿತದ ಮಣ್ಣು: ಸಂಚಾರಕ್ಕೆ ಅಡ್ಡಿ

300x250 AD

ಹೊನ್ನಾವರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಭಾಸ್ಕೇರಿ-ವರ್ನಕೇರಿಯಲ್ಲಿ ಗುಡ್ಡಕುಸಿತದ ಮಣ್ಣು ಸಂಪೂರ್ಣ ತೆರವುಗೊಳಿಸಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಇಲ್ಲಿ ಬ್ಯಾರಿಕೇಟ್‌ಗಳನ್ನು ಅಳವಡಿಸಲಾಗಿದೆ. ದೊಡ್ಡ ದೊಡ್ಡ ವಾಹನಗಳು ಏಕಾಏಕಿ ರಸ್ತೆಯಲ್ಲಿ ಬಂದಾಗ ಒಂದೇ ಬದಿಯ ರಸ್ತೆಯಲ್ಲಿ ಸಂಚರಿಸಬೇಕಾಗುತ್ತದೆ. ಇನ್ನೊಂದು ಬದಿಯ ಅರ್ಧರಸ್ತೆ ಮಣ್ಣು ಆವರಿಸಿಕೊಂಡಿದೆ. ಒಂದೊಮ್ಮೆ ಅತಿವೇಗದಲ್ಲಿ ವಾಹನ ಸಂಚರಿಸಿಕೊಂಡು ಬಂದಲ್ಲಿ ಎದುರಿನಿಂದ ಬರುವ ವಾಹನಕ್ಕೆ ಢಿಕ್ಕಿಯಾಗಿ ಅಪಘಾತ ನಡೆಯೋದು ಪಕ್ಕಾ. ಅಧಿಕಾರಿಗಳು ನಿದ್ದೆಯಲ್ಲಿದ್ದಾರೋ ಎಂದು ಜನ ಜರಿಯುತ್ತಿದ್ದಾರೆ. ಏನಾದರು ಅನಾಹುತ ‌ಸಂಭವಿಸಿದಾಗ ಮಾತ್ರ ತರಾತುರಿಯಲ್ಲಿ ಎಚ್ಚೆತ್ತುಕೊಳ್ಳುತ್ತಾರೆ. ಅಲ್ಲಿವರೆಗೂ ಇಂತಹ ಲೋಪಗಳು ಮುಂದುವರೆಯುತ್ತದೆ. ಇನ್ನು ಮಳೆ ಮತ್ತೇ ಮುಂದುವರೆದ ಪಕ್ಷದಲ್ಲಿ ಇಲ್ಲಿ ಮತ್ತೆ ಗುಡ್ಡಕುಸಿಯುವ ಸಾಧ್ಯತೆ ದಟ್ಟವಾಗಿದೆ. ಬೃಹತ್ ಬಂಡೆಯೊಂದು ರಸ್ತೆಮೇಲೆ ಬೀಳಲು ಹಾತೊರೆಯುವಂತಿದೆ. ಈ ಹಿಂದೆನಡೆದ ಗುಡ್ಡಕುಸಿತದಲ್ಲಿ ಬ್ರಹತ್ ಬಂಡೆಗಲ್ಲು ಬಿದ್ದಿತ್ತು. ಅದೃಷ್ಟವಶಾತ್ ಆ ಸಂದರ್ಭದಲ್ಲಿ ಸಂಚಾರಿಗಳಿಲ್ಲದರಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಒಮ್ಮೆ ಬಚಾವ್ ಆಗಿದ್ದರೆ ಎಂದು ನಿರ್ಲಕ್ಷಿಸುವುದು ತಪ್ಪು,ಇನ್ನೊಮ್ಮೆ ಇದಕ್ಕು ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಮುಂಜಾಗ್ರತಾ ಕ್ರಮವಾಗಿ ಎಚ್ಚೆತ್ತುಕೊಂಡಾಗ ಮಾತ್ರ ಜರುಗಬಹುದಾದ ಘಟನೆತಪ್ಪಿಸಬಹುದು.ರಸ್ತೆಬದಿ ವಾಲಿಕೊಂಡಿರುವ ಮರಗಿಡಗಳನ್ನು ಅರಣ್ಯ ಇಲಾಖೆ ತೆರವುಗೊಳಿಸಬೇಕಿದೆ. ಇದು ಸಹ ಗುಡ್ಡದಷ್ಟೇ ಅಪಾಯಕಾರಿ. ಯಾವಾಗ ಮುರಿದು ಅಥವಾ ಬುಡಸಮೇತ ಕಿತ್ತುಬಿಳುತ್ತಾ ಎನ್ನುವುದು ತಿಳಿಯದಾಗಿದೆ. ವಾಹನ ಸಂಚಾರಿಗಳು ಮಾತ್ರ ಭಯದಲ್ಲಿ ಸಂಚಾರ ನಡೆಸಬೇಕಿದೆ.

300x250 AD
Share This
300x250 AD
300x250 AD
300x250 AD
Back to top