Slide
Slide
Slide
previous arrow
next arrow

ಬಯಸಿದ ಉದ್ಯೋಗ ಪಡೆಯಲು ಅಗತ್ಯ ಕೌಶಲ್ಯ ವೃದ್ಧಿಸಿಕೊಳ್ಳಿ: ಶ್ರೀಧರ ಮುಂದಲಮನಿ

300x250 AD

ಶಿರಸಿ: ಬಯಸಿದ ಉದ್ಯೋಗ ಪಡೆಯಲು ಅಗತ್ಯ ಕೌಶಲ್ಯ ವೃದ್ಧಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ತಾಲೂಕು ದಂಡಾಧಿಕಾರಿಗಳಾದ ಶ್ರೀಧರ ಮುಂದಲಮನಿ ಅಭಿಪ್ರಾಯಪಟ್ಟರು. ನಗರದ ಟಿ.ಎಮ್.ಎಸ್. ಸಭಾಭವನದಲ್ಲಿ ಸ್ಕೊಡ್‌ವೆಸ್ ಸಂಸ್ಥೆ, ದೇಸಾಯಿ ಫೌಂಡೇಶನ್ ಗುಜರಾತ್ ಹಾಗೂ ಅಜೀಮ್ ಪ್ರೇಮ್‌ಜಿ ಫಿಲೋಂತ್ರಪಿಕ್ ಇನಿಷಿಯೇಟಿವ್ಸ್ರವರ ಸಹಯೋಗದಲ್ಲಿ ನಡೆದ ಜನರಲ್ ಡ್ಯೂಟಿ ಅಸಿಸ್ಟಂಟ್ ನರ್ಸಿಂಗ್ ಟ್ರೇನಿಂಗ್ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧನೆ ಹಾಗೂ ಬ್ಯೂಟಿಷಿಯನ್ ಹಾಗೂ ವಿವಿಧ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡುತ್ತಿದ್ದರು.

ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಕವಾದ ಪೈಪೋಟಿ ಎದುರಿಸಿ ಜೀವನದಲ್ಲಿ ಸಾರ್ಥಕತೆ ಪಡೆಯಬೇಕಾಗಿರುವುದರಿಂದ ಪ್ರತಿಯೊಬ್ಬರು ಉದ್ಯೋಗಕ್ಕೆ ಅಗತ್ಯವಿರುವ ಎಲ್ಲಾ ಕೌಶಲ್ಯಗಳನ್ನು ಹೊಂದುವುದು ಅನಿವಾರ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಕೆ.ಎನ್. ಹೊಸಮನಿಯವರು ಮಾತನಾಡಿ ಮೌಲ್ಯಾಧಾರಿತ ಉದ್ಯೋಗಿಗಳು ಮಾತ್ರ ಎಲ್ಲಾ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾಗುತ್ತಾರೆ ಎಂದರು. ಅತಿಥಿಗಳಾಗಿದ್ದ ಎಮ್.ಇ.ಎಸ್. ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯೆ ಬೇಬಿ ನಾಯ್ಕ ಮಾತನಾಡಿದರು. ಆರಂಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ದೇಸಾಯಿ ಫೌಂಡೇಶನ್‌ನ ಪ್ರತಿನಿಧಿಯಾದ ವಿನಯಾ ನಾಯ್ಕ ಹಾಗೂ ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಯೋಜನಾ ಸಂಯೋಜಕರಾದ ಉಮೇಶ ಮರಾಠಿ ಕಾರ್ಯಕ್ರಮ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top