ವರದಿ : ಸಂದೇಶ್ ಎಸ್.ಜೈನ್
ದಾಂಡೇಲಿ : ಹೊರಗುತ್ತಿಗೆ ಸಿಬ್ಬಂದಿಯಾಗಿ ಕಳೆದ 8 ವರ್ಷಗಳಿಂದ ದಾಂಡೇಲಿಯ ಪಶುವೈದ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸಂದೀಪ್ ಶಿರೋಡ್ಕರ್ ಅವರನ್ನು ಕೆಲಸದಿಂದ ತೆಗೆಯುವ ಒಳಸಂಚು ನಡೆಯುತ್ತಿರುವ ಕಳವಳಕಾರಿ ವಿದ್ಯಾಮಾನವೊಂದು ನಡೆದಿದೆ ಎನ್ನುವ ಮಾಹಿತಿ ಮಾಧ್ಯಮಕ್ಕೆ ಲಭ್ಯವಾಗಿದೆ.
ಯಾವುದೇ ಸಂದರ್ಭದಲ್ಲಿ ಎಂತಹದ್ದೇ ಸಂದರ್ಭದಲ್ಲಿಯೂ ಜೀವನ್ಮರಣದ ಹೋರಾಟದ ಸಂದರ್ಭದಲ್ಲಿ ಇದ್ದಂತಹ ಅನೇಕ ಗೋವುಗಳನ್ನು ರಕ್ಷಣೆ ಮಾಡಿದಂತಹ ಕೀರ್ತಿ ಸಂದೀಪ್ ಶಿರೋಡ್ಕರ್ಗೆ ಸಲ್ಲಬೇಕು. ಯಾವುದೇ ಸ್ವಾರ್ಥವಿಲ್ಲದೆ ನಿಸ್ವಾರ್ಥವಾಗಿ ಕೆಲಸ ಮಾಡಿದ ನಮ್ಮ ಸಂದೀಪ್ ಶಿರೋಡ್ಕರ್ ಇವರನ್ನು ಕೆಲಸದಿಂದ ತೆಗೆಯುವ ಹುನ್ನಾರ ನಡೆಯುತ್ತಿರುವುದು ಮಾತ್ರ ಇಡೀ ದಾಂಡೇಲಿಗರಿಗೆ ನೋವು ಮತ್ತು ಅತ್ಯಂತ ಆತಂಕದ ಸಂಗತಿಯಾಗಿದೆ.
ಅಲ್ಪ ವೇತನಕ್ಕೆ ಅತಿ ಹೆಚ್ಚು ಕೆಲಸ ಮಾಡುವ ಪ್ರಾಮಾಣಿಕ ಕೆಲಸಗಾರ ಸಂದೀಪ್ ಶಿರೋಡ್ಕರ್ ಇವರನ್ನು ಒಂದು ವೇಳೆ ಕೆಲಸದಿಂದ ತೆಗೆದು ಹಾಕಿದ್ದೆ ಆದಲ್ಲಿ ದಾಂಡೇಲಿಗೆ ದಾಂಡೇಲಿಯೆ ಒಂದಾಗಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗಿದೆ. ದಾಂಡೇಲಿಗೆ ಸಂದೀಪ್ ಶಿರೋಡ್ಕರ್ರಂತಹ ಕೆಲಸಗಾರರು ಬೇಕೇ ವಿನಃ ಕುರ್ಚಿ ಬಿಸಿ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೇಡವೇ ಬೇಡ ಎಂಬ ಗಟ್ಟಿ ನಿರ್ಧಾರಕ್ಕೆ ದಾಂಡೇಲಿಯ ಜನ ಬರಬೇಕಾಗಿದೆ.
ಈಗಲೂ ಸುಮ್ಮನೆ ಇದ್ದರೆ, ಪ್ರಾಮಾಣಿಕರಿಗೆ ಅನ್ಯಾಯವಾಗಲಿದೆ ಎನ್ನುವುದಕ್ಕಿಂತ ಅನೇಕ ಗೋವುಗಳ ಜೀವವನ್ನು ಉಳಿಸುವ ಮಹೋನ್ನತ ಕಾಯಕವು ಸ್ಥಗಿತವಾಗಲಿದೆ ಎನ್ನುವ ಆತಂಕ ದಾಂಡೇಲಿಗರದ್ದಾಗಿದೆ.