ಸಿದ್ದಾಪುರ: ರೈತರು ತಮ್ಮ ಅಡಿಕೆ ತೋಟಗಳಲ್ಲಿ ಪರ್ಯಾಯ ಬೆಳೆ ಬಗ್ಗೆ ಚಿಂತಿಸಬೇಕು. ತಮ್ಮ ಅಡಿಕೆ ಉತ್ಪನ್ನಗಳ ಜತೆ ಕಾಫಿ, ಕೊಕೋ, ಕಾಳುಮೆಣಸು ಇನ್ನಿತರೆ ಬೆಳೆಗಳನ್ನು ಬೆಳೆಯುವಲ್ಲಿ ಸೂಕ್ತ ಪರಿಜ್ಞಾನವನ್ನು ಪಡೆದುಕೊಂಡು ಕಾರ್ಯೋನ್ಮುಖರಾಗಲು ಮುಂದಾಗಬೇಕಾಗಿದೆ. ಅಲ್ಲದೇ ಸಾಲದ ಭಾದೆಯಿಂದ ಹೊರಬಂದು ಉಳಿತಾಯದ ಮನೋಭಾವವನ್ನು ಹೊಂದಲು ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.
ಅವರು ಟಿ.ಎಂ.ಎಸ್.ಕಾನಸೂರು ಶಾಖೆಯ ಸಹಕಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಭೆಯಲ್ಲಿ ಏಳು ಜನ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸನ್ಮಾನಿತರುಗಳೆಂದರೆ ಗೋಪಾಲ ರಾಮಚಂದ್ರ ಹೆಗಡೆ ಮಾದ್ನಕಳ, ವಿರೂಪಾಕ್ಷ ತಿಮ್ಮಯ್ಯ ಹೆಗಡೆ ಶೀಗೇಹಳ್ಳಿ, ಸೀತಾರಾಮ ಲಕ್ಷ್ಮಿನಾರಾಯಣ ಹೆಗಡೆ ತ್ಯಾಗಲಿ, ರಾಮಪ್ಪ ಈರಪ್ಪ ನಾಯ್ಕ ಬಾಳೇಕೊಪ್ಪ, ರಾಧಾ ನಾರಾಯಣ ನಾಯ್ಕ ಹಳ್ಳಿಬೈಲ, ಶಂಕರ ಕೃಷ್ಣ ದೇವಾಡಿಗ ಮಾಸ್ತಿಜಡ್ಡಿ ಹಾಗೂ ರಾಮನಾಥ ಅನಂತ ಹೆಗಡೆ ಹರೀಶಿ ಇವರುಗಳನ್ನು ಸನ್ಮಾನಿಸಲಾಯಿತು.
ಸನ್ಮಾನಿತರ ಪರವಾಗಿ ವಿರೂಪಾಕ್ಷ ತಿಮ್ಮಯ್ಯ ಹೆಗಡೆ ಶೀಗೇಹಳ್ಳಿ ಅವರು ಮಾತನಾಡಿ ತಮ್ಮೆಲ್ಲರಿಗಿತ್ತ ಸನ್ಮಾನಕ್ಕೆ ಕೃತಜ್ಞತೆ ಹೇಳಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಎಂ.ಜಿ. ನಾಯ್ಕ, ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ, ನಿರ್ದೇಶಕರುಗಳಾದ ಕೆ.ಕೆ. ನಾಯ್ಕ ಸುಂಕತ್ತಿ, ಎಸ್.ಎಲ್. ಹೆಗಡೆ ಸಾಯಿಮನೆ, ಜಿ.ಆರ್. ಹೆಗಡೆ ಹಳದೋಟ, ಸಿ.ಎನ್. ಹೆಗಡೆ ತೆಂಗಾರಮನೆ, ಎಲ್.ಆರ್. ಹೆಗಡೆ ಬಾಳೇಕುಳಿ, ಎಂ.ಎನ್. ಹೆಗಡೆ ತಲೆಕೆರೆ, ಪಿ.ಕೆ. ನಾಯ್ಕ ಮುಗದೂರು, ಸುಧೀರ ಗೌಡರ್ ಬಾಳೇಕುಳಿ, ಸುಬ್ರಹ್ಮಣ್ಯ ಭಟ್ ಚಟ್ನಳ್ಳಿ ಹಾಗೂ ಸಲಹಾ ಸಮಿತಿ ಸದಸ್ಯರುಗಳಾದ ನಾಗೇಶ ಹೆಗಡೆ ಹರೀಶಿ ಕುಂಟಗಳಲೆ, ಎಸ್.ಎನ್. ಭಟ್ ಭಾಗವತ, ಎಂ.ಆರ್. ಭಟ್ ತಟ್ಟಿಕೈ, ವಿನಾಯಕ ಹೆಗಡೆ ಅವರುಗಳು ಉಪಸ್ಥಿತರಿದ್ದರು.
ಎಸ್.ಎನ್. ಭಟ್ ಭಾಗವತ ಅವರು ಮಾತನಾಡಿದರು. ಸಿ.ಎನ್. ಹೆಗಡೆ ತೆಂಗಾರಮನೆ ಅವರು ಸ್ವಾಗತಿಸಿದರು. ಎಸ್.ಎಲ್. ಹೆಗಡೆ ಸಾಯಿಮನೆ ವಂದಿಸಿದರು. ಜಿ.ಜಿ. ಹೆಗಡೆ ಬಾಳಗೋಡ ಹಾಗೂ ಶಾಖಾ ವ್ಯವಸ್ಥಾಪಕ ಎಸ್.ಎನ್. ಹೆಗಡೆ ನಿರೂಪಿಸಿದರು.