ಹೊನ್ನಾವರ: ಹೊನ್ನಾವರದ ತಾಲೂಕ ಆಸ್ಪತ್ರೆಯ ಆಡಳಿತ ಅಧಿಕಾರಿಗಳಾದ ಡಾಕ್ಟರ್ ರಾಜೇಶ್ ಕಿಣಿ ದಂಪತಿಗಳು ಗುರು ರಾಘವೇಂದ್ರ ಸ್ವಾಮಿಯ ಆರಾಧನೋತ್ಸವದ ನಿಮಿತ್ತ ಆ.22, ಗುರುವಾರ ತಾಲೂಕಿನ ಅಪ್ಸರಕೊಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿದ್ದರು.
ಇವರು ವಿಶೇಷ ಭೋಜನದ ಪೂರ್ಣ ಖರ್ಚನ್ನು ಭರಿಸುವ ಜೊತೆಗೆ, ಕಲಿಕೆಗೆ ಅನುಕೂಲಿಸುವ ಸುಮಾರು 9,000 ರೂಪಾಯಿ ಬೆಲೆಯ ಪುಸ್ತಕಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶ್ರೀಯುತರಿಗೆ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಯವರು ,ಪಾಲಕ ಪೋಷಕರು ಹಾಗೂ ವಿದ್ಯಾರ್ಥಿಗಳ ಪರವಾಗಿ ಶಾಲು ಹೊದಿಸಿ ಫಲತಾಂಬೂಲ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿಗಳಾದ ರಮೇಶ್ ಮಲ್ಲಪ್ಪ ಸರ್,ಗ್ರಾಮ ಪಂಚಾಯತ್ ಸದಸ್ಯರಾದ ಅಣ್ಣಪ್ಪ ಗೌಡ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಣ್ಣಪ್ಪ ಗೌಡ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಕಲಾವತಿ ಗೌಡ ಮತ್ತು ಡಾಕ್ಟರ್ ರಾಜೇಶ್ ಕಿಣಿ ಸರ್ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ನಾಗಭೂಷಣ್ ಶೆಟ್ಟಿ ಅವರು ಹಾಗೂ ಸಹ ಶಿಕ್ಷಕಿ ಅಹಲ್ಯಾ ಭಟ್ ಹಾಗೂ ಅತಿಥಿ ಶಿಕ್ಷಕರಾದ ಶ್ವೇತಾ ಮೇಸ್ತ ಕಾರ್ಯಕ್ರಮದ ಉಸ್ತುವಾರಿ ವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಗಣಪಯ್ಯ ಗೌಡ ಶಿಕ್ಷಕರು ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ಜೊತೆಯಲ್ಲಿ ನಿರೂಪಣೆ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಹೋಳಿಗೆ ಊಟದ ವ್ಯವಸ್ಥೆಯಲ್ಲಿ ಅಡಿಗೆ ಸಿಬ್ಬಂದಿಗಳಾದ ನಾಗರತ್ನ ಗೌಡ, ದೀಪಾ ಗೌಡ, ಇವರ ಜೊತೆಗೆ ಕಲಾವತಿ ಗೌಡ,ಶರಾವತಿ ಗೌಡ, ಸುಧಾ ಗೌಡ ಸಹಕರಿಸಿದರು.