ಸಿದ್ದಾಪುರ: ತಾಲೂಕಿನ ಕಲ್ಲುರು ಸಮೀಪದ ಹೆಗ್ಗೆಕೊಪ್ಪ ಗ್ರಾಮದ ಅರಣ್ಯ ಸ.ನಂ.121ರಲ್ಲಿ ಆ.19ರ ರಂದು ಅಕ್ರಮವಾಗಿ ವನ್ಯ ಪ್ರಾಣಿಗಳನ್ನು ಬೇಟೆಯಾಡುತ್ತಿರುವದನ್ನು ಖಚಿತ ಮಾಹಿತಿ ಮೇರೆಗೆ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು,ಸಿಬ್ಬಂದಿಗಳು ದಾಳಿ ನಡೆಸಿದ್ದು ಓರ್ವ ಬೇಟೆಗಾರ ಸಿಕ್ಕಿದ್ದು ಉಳಿದ ಮೂವರು ಪರಾರಿಯಾಗಿದ್ದಾರೆ.
ಬಂಧಿತ ಆರೋಪಿ ಹೆಗ್ಗೆಕೊಪ್ಪ ಪುರದಮಠದ ಮಂಜುನಾಥ ಗಣಪತಿ ನಾಯ್ಕ(36) ಅವನನ್ನು ವಶಕ್ಕೆ ಪಡೆದಿದ್ದು ಅವರು ಬಳಸಿದ ಮಾರುತಿ ಕಾರ್, ಮೊಬೈಲ್ ಫೋನ್,ಚಾಕು ಇತ್ಯಾದಿಯನ್ನು ವಶಕ್ಕೆ ಪಡೆದಿದ್ದು ವನ್ಯ ಜೀವಿ ಸಂರಕ್ಷಣಾ ಕಾನೂನಿನ ಪ್ರಕಾರ ಕೇಸು ದಾಖಲಿಸಿ ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ|ಅಜ್ಜಯ್ಯ ಅವರ ನಿರ್ದೇಶನದಂತೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರಾ ಯು.ಜೆ.ಅವರ ಮಾರ್ಗದರ್ಶನದ ಮೇರೆಗೆ ವಲಯ ಅರಣ್ಯಾಧಿಕಾರಿ ಅಜಯಕುಮಾರ ಹಾಗೂ ಸಿದ್ದಾಪುರ ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿದ್ದು ಉಳಿದ ಆರೋಪಿಗಳ ಶೋಧ ಕಾರ್ಯ ನಡೆದಿದೆ.