Slide
Slide
Slide
previous arrow
next arrow

ಸೆ.5ಕ್ಕೆ ಪ್ರಬಂಧ ಸ್ಪರ್ಧೆ

300x250 AD

ಶಿರಸಿ: ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರ 164 ನೇ ಜನ್ಮದಿನಾಚರಣೆಯ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸೆ.5, ಗುರುವಾರ ಮಧ್ಯಾಹ್ನ 3ರಿಂದ ನಗರದ ಲಯನ್ಸ್ ಶಾಲೆಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಸಾಧ್ಯವೇ? ( Can development take place without harming the environment) ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ ನಡೆಯಲಿದ್ದು, ಬಹುಮಾನದ ಮೊತ್ತ : ಪ್ರಥಮ-ರೂ. 5000/-, ದ್ವಿತೀಯ–ರೂ. 3000/-, ತೃತೀಯ– ರೂ. 2000/- ನಿಗದಿಯಾಗಿದೆ‌.

ನಿಬಂಧನೆಗಳು :
1) ಪ್ರತಿ ಪ್ರೌಢಶಾಲೆಯ ಒಂದು ವಿದ್ಯಾರ್ಥಿ/ವಿದ್ಯಾರ್ಥಿನಿ ಗೆ ಮಾತ್ರ ಅವಕಾಶ. (ಶಾಲಾ ಮುಖ್ಯಾಧ್ಯಾಪಕರಿಂದ ಪತ್ರ ತರಬೇಕು.)
2) ಕನ್ನಡ ಅಥವಾ ಇಂಗ್ಲೀಷ ಭಾಷೆಯಲ್ಲಿ ಮಾತ್ರ ಬರೆಯಬೇಕು.
3) ಒಂದು ಘಂಟೆಯ ಅವಧಿ ಇದ್ದು ಕನಿಷ್ಟ 300 ಪದಗಳನ್ನು ಬರೆಯಬೇಕು.
4) ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.
5) ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ದಿನಾಂಕ : 15/09/2024 ರಂದು ಸಂಜೆ ನಡೆಯುವ ಇಂಜಿನೀಯರುಗಳ ದಿನಾಚರಣೆಯ ಸಂದರ್ಭದಲ್ಲಿ ನೀಡಲಾಗುವುದು.
6) ವಿಷಯ, ಕೈಬರಹ (Hand writing), ನಿರೂಪಣಾ ಶೈಲಿ ಇವುಗಳನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಾಗುವುದು.
7) ರೈಟಿಂಗ್ ಪ್ಯಾಡ್ ಮತ್ತು ಪೆನ್ನುಗಳನ್ನು ಮಾತ್ರ ವಿದ್ಯಾರ್ಥಿಗಳು ತರಬೇಕು. ಪ್ರಬಂಧ ಬರೆಯುವ ಪೇಪರಗಳನ್ನು ಪೂರೈಸಲಾಗುವುದು.
8) ಪ್ರಬಂಧ ಬರೆಯುವ ಸಂದರ್ಭದಲ್ಲಿ ಯಾವುದೇ ಚೀಟಿ ಅಥವಾ ಮೊಬೈಲ್‌ಗಳ ಬಳಕೆಯನ್ನು ನಿಷೇಧಿಸಲಾಗಿದೆ.
9) ಸ್ಪರ್ಧಾರ್ಥಿಗಳು 15 ನಿಮಿಷ ಮುಂಚಿತವಾಗಿ ತಮ್ಮ ಹಾಜರಾತಿಯನ್ನು ನೀಡಬೇಕು.
10) ಹೆಸರು ನೊಂದಾಯಿಸಲು ಕೊನೆಯ ದಿನಾಂಕ : 02/09/2024.

300x250 AD

ಸಂಪರ್ಕಿಸಬೇಕಾದ ಹೆಸರು ಮತ್ತು ಮೊಬೈಲ್ ನಂಬರ್ ಇಂ. ಶ್ಯಾಮಸುಂದರ ಎಂ. ಭಟ್, ಅಧ್ಯಕ್ಷರು –Tel:+919448236700
ಇಂ. ಎಲ್. ಆರ್. ಹೆಗಡೆ, ಕಾರ್ಯದರ್ಶಿಗಳು –Tel:+919448153355

Share This
300x250 AD
300x250 AD
300x250 AD
Back to top