Slide
Slide
Slide
previous arrow
next arrow

ನಾರಾಯಣಗುರುಗಳಿಂದ ಹಿಂದುಳಿದ ವರ್ಗ, ಶೋಷಿತರ ಬದುಕಲ್ಲಿ ಬೆಳಕು ಮೂಡಿದೆ: ಕೆ.ಜಿ.ನಾಗರಾಜ

300x250 AD

ಸಿದ್ದಾಪುರ: ತಾಲೂಕಾ ಆಡಳಿತ, ತಾಲೂಕಾ ಪಂಚಾಯ್ತಿ, ಪಟ್ಟಣ ಪಂಚಾಯತ ಹಾಗೂ ತಾಲೂಕಾ ನಾಮಧಾರಿ ಸಮಾಜದ ವತಿಯಿಂದ ಸಿದ್ದಾಪುರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಹಾಗೂ ದೇವರಾಜ ಅರಸು ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮೊದಲು ಇಲ್ಲಿಯ ತಾಲೂಕಾ ಆಡಳಿತ ಸೌಧದಿಂದ ನಾರಾಯಣಗುರು ಭಾವಚಿತ್ರದೊಂದಿಗೆ ಪಟ್ಟಣದ ವಿವಿದೆಡೆ ಡೊಳ್ಳು ಕುಣಿತದ ಮೆರವಣಿಗೆ ನಡೆಸಿ ನಂತರ ತಾಲೂಕಾ ಪಂಚಾಯ್ತಿ ಸಭಾಭವನದಲ್ಲಿ ಇಬ್ಬರು ಮಹನೀಯರ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಗ್ಯಾರೆಂಟಿ ಅನುಷ್ಠಾನ ಸಮಿತಿ ತಾಲೂಕಾ ಅಧ್ಯಕ್ಷ ಕೆ.ಜಿ.ನಾಗರಾಜ ಮಾತನಾಡಿ, ನಾರಾಯಣಗುರುಗಳ ಜನನದ ನಂತರ ಹಿಂದುಳಿದ ವರ್ಗ ಹಾಗೂ ಶೋಷಿತರ ಬದುಕಲ್ಲಿ ಬೆಳಕು ಮೂಡಿದೆ. ಶಿಕ್ಷಣ ಹಾಗೂ ಧಾರ್ಮಿಕ ಕ್ರಾಂತಿಯ ಮೂಲಕ ಸಮಾಜದಲ್ಲಿ ಬದಲಾವಣೆ ತಂದವರು ನಾರಾಯಣಗುರು ಎಂದ ಅವರು, ಉಳುವವನೆ ಹೊಲದ ಒಡೆಯ ಎಂಬ ಕಾನೂನು ತಂದು ಭೂಮಿಯ ಹಕ್ಕು ಕೊಡಿಸಿ ಸಾಮಾಜಿಕ ಅಸ್ಥಿತ್ವ ಕೊಟ್ಟ ದೊರೆ ದೇವರಾಜ ಅರಸು. ಇಬ್ಬರು ಮಹನೀಯರ ಕೊಡುಗೆಯನ್ನು ಸ್ಮರಿಸುತ್ತಾ ಉತ್ತಮ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗೋಣ ಎಂದರು.
ನಾಣಿಕಟ್ಟಾ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಕೆ.ನಾಯ್ಕ ಹೊಸಳ್ಳಿ ಉಪನ್ಯಾಸ ನೀಡಿ, ನಾರಾಯಣಗುರು ಹಾಗೂ ದೇವರಾಜ ಅರಸು ಪ್ರಾಥಸ್ಮರಣೀಯ ಹಾಗೂ ಭೂಮಿತೂಕದ ವ್ಯಕ್ತಿಗಳು. ಜಾತಿ ಹಾಗೂ ಧರ್ಮವನ್ನು ಮೀರಿದ ಸಮಾಜ ನಿರ್ಮಾಣದಲ್ಲಿ ನಾರಾಯಣಗುರು ಪಾತ್ರ ಅತ್ಯಮೂಲ್ಯವಾಗಿದೆ. ಹಿಂದುಳಿದ ಹಾಗೂ ಶೋಷಿತ ಸಮುದಾಯದ ರೈತರು ಇವತ್ತು ತಮ್ಮದೇ ಭೂಮಿಯ ಹಕ್ಕು ಪಡೆದು ಒಂದು ತುತ್ತು ಉಣ್ಣುತ್ತಿದ್ದರೆ ಅದರ ಶ್ರೇಯ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.
ಗ್ರೇಡ್ 2 ತಹಶೀಲ್ದಾರ ಜಿ.ಎಲ್.ಶ್ಯಾಮಸುಂದರ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ ನಾಯ್ಕ, ತಾಲೂಕಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ, ತಾಲೂಕಾ ಆರೋಗ್ಯಾಧಿಕಾರಿ ಲಕ್ಷ್ಮೀಕಾಂತ ನಾಯ್ಕ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಜಗದೀಶ ನಾಯ್ಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶಾ ಬೇಗಂ, ಪಪಂ ಸದಸ್ಯರಾದ ರವಿಕುಮಾರ ನಾಯ್ಕ, ನಂದನ ಬೋರಕರ್, ಬಿ.ಎಸ್.ಎನ್.ಡಿ.ಪಿ ಅಧ್ಯಕ್ಷ ವಿನಾಯಕ ನಾಯ್ಕ, ನಾಮಧಾರಿ ಸಮಾಜದ ಪ್ರಮುಖರಾದ ವಿ.ಎನ್.ನಾಯ್ಕ, ವಸಂತ ನಾಯ್ಕ, ವೀರಭದ್ರ ನಾಯ್ಕ, ಸಿ.ಆರ್.ನಾಯ್ಕ, ಭೂ ನ್ಯಾಯ ಮಂಡಳಿ ಸದಸ್ಯ ಎಚ್.ಕೆ‌.ಶಿವಾನಂದ ಭೂಮಾಪನ ಮತ್ತೆ ಸರ್ವೆ ಇಲಾಖೆಯ ಉಷಾ ಪ್ರಶಾಂತ ಸ್ವಾಗತಿಸಿದರು.

300x250 AD


ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಅಂಗವಾಗಿ ಚಂಡೆವಾದಕ ಪುರಮಠದ ಧನಂಜಯ ನಾಯ್ಕ, ಯಕ್ಷಗಾನದ ಬಾಲ ಕಲಾವಿದೆ ನಿಶಾ ನಾಯ್ಕ ಹೊನ್ನೆಬಿಡಾರ ಹಾಗೂ ಯಕ್ಷಗಾನ ಭಾಗವತ ದಿ. ರಾಮಚಂದ್ರ ನಾಯ್ಕ ಹೆಮ್ಮನಬೈಲ್ ಇವರ ಮರಣೋತ್ತರವಾಗಿ ಅವರ ಪತ್ನಿ ಗೀತಾ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಜತೆಗೆ ಆರ್ಯ, ಈಡಿಗ, ಬಿಲ್ಲವ, ನಾಮಧಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆಸಲಾದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಇದೇ ವೇಳೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

Share This
300x250 AD
300x250 AD
300x250 AD
Back to top