ಅಂಕೋಲಾ: ಜಿಪಂ, ತಾಪಂ, ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ ಪೂರ್ವ ಬಾಲಕರ ವಸತಿ ನಿಲಯದಲ್ಲಿ ದಿ, ದೇವರಾಜ ಅರಸು 109ನೇ ಜನ್ಮದಿನಾಚಾರಣೆ ಅದ್ದೂರಿಯಿಂದ ನಡೆಯಿತು. ತಹಶೀಲ್ದಾರ್ ಅನಂತ್ ಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು.
ಉತ್ತಮ ಸಾಮಾಜಿಕ ಕಳಕಳಿಯ ಹರಿಕಾರ್, ಉಳುವವನೆ ಒಡೆಯ ಪದ್ಧತಿ ಜಾರಿಗೆ ತಂದ ನಾಯಕ, ಗರೀಬಿ ಹಟಾವೋ ಪದ್ಧತಿ ಜಾರಿಗೆ ತಂದ ವಿಶೇಷ ವ್ಯಕ್ತಿತ್ವ ಇವರ ದಿನಾಚರಣೆ ಇಲ್ಲಿಯ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಉಳಿಯುವ ವ್ಯವಸ್ಥೆ ಕಲ್ಪಿಸಿದ ಮಹಾನ್ ಮೇರು ವ್ಯಕ್ತಿತ್ವ ದೇವರಾಜ ಅರಸು ಎಂದು ತಹಶೀಲದಾರ್ ಅನಂತ ಶಂಕರ್ ಹೇಳಿದರು.
ದೇವರಾಜ ಅರಸು ಭಾವಚಿತ್ರಕ್ಕೆ ಪುಷ್ಪರ್ಚನೆ ನಡೆಸಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಬಹುಮಾನ ವಿತರಿಸಿ ಮಾತನಾಡಿದರು. ಪ್ರಾಚಾರ್ಯ ವಿನಾಯಕ ಹೆಗಡೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕಿ ಪದ್ಮಾ ನಾಯಕ ಮಾತನಾಡಿ ಸರಕಾರದಿಂದ ದೊರೆಯುವ ಉಚಿತ ಯೋಜನೆ, ಶಿಕ್ಷಣ ಇದರ ಮೂಲಕ ತಾವೆಲ್ಲರೂ ಸಾಧನೆ ಮಾಡಬೇಕು. ದೇವರಾಜ ಅರಸು ಈ ನಾಡು ಕಂಡ ದೀಮಂತ ಜನನಾಯಕ ಎಂದರು.
ವೇದಿಕೆಯಲ್ಲಿ ಪುರಸಭಾ ಸದಸ್ಯೆ ರೇಖಾ ಗಾಂವಕರ, ತಾಪಂ ಸಹಾಯಕ ಲೆಕ್ಕಾಧಿಕಾರಿ ಶ್ರೀಮಂತಿ ನಾಯಕ, ಕೃಷಿ ಇಲಾಖೆಯ ಪ್ರವೀಣ್ ನಾಯಕ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಭಾರತಿ ನಾಯಕ, ಸೀತಾ ಗೌಡ, ಶಿಕ್ಷಣ ಇಲಾಖೆಯ ಶಪಿ , ತಾಪಂ ಪ್ರಥಮ ದರ್ಜೆ ಸಹಾಯಕ ವಿನಯ್ ಭಟ್ ಉಪಸ್ಥಿತರಿದ್ದರು.
ಎಸ್ ಎಸ್ ಎಲ್ ಸಿ ಯಲ್ಲಿ %90ಅಂಕ ಗಳಿಸಿದ ಕಾಲ್ ಮಹೇಶ್, ದ್ವೀತಿಯ ಪಿಯುಸಿಯಲ್ಲಿ 93%ಅಂಕ ಗಳಿಸಿದ ಶಿವಾನಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಾರತಿ ನಾಯಕ ಸ್ವಾಗತಿಸಿದರು ಗೋಪಿಕಾ ಸಂಗಡಿಗರು ನಾಡಗೀತೆ ಪ್ರಸ್ತುತ ಪಡಿಸಿದರು. ಅಂಜಲಿ ಭಾಟೀಯಾ ನಿರ್ವಹಿಸಿದರು. ಶಿವಾನಂದ ನಾಯ್ಕ್ ವಂದಿಸಿದರು. ಪ್ರಭಾ ನಾಯ್ಕ ಬಾಹುಮಾನಿತರ ಯಾದಿ ಓದಿದರು.