ಶಿರಸಿ : ಕಳೆದ ಮೂರು ದಶಕಗಳಿಂದ ಮುದ್ರಣ ಕಾರ್ಯದಲ್ಲಿ ಜಿಲ್ಲೆಯ ಗಮನ ಸೆಳೆಯುತ್ತಿರುವ ಶಿರಸಿಯ ದಿ ಚೇತನಾ ಪ್ರಿಂಟಿಂಗ್ & ಪಬ್ಲಿಷಿಂಗ್ ಕೋ-ಒಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಹಿರಿಯ ಸಹಕಾರಿ ಜಿ. ಎಂ ಹೆಗಡೆ ಹಾಗೂ ಉಪಾಧ್ಯಕ್ಷರಾಗಿ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಇಲ್ಲಿಯ ಎ.ಪಿ.ಎಮ್.ಸಿ ಆವಾರದ ಸಂಘದ ಕಚೇರಿಯಲ್ಲಿ ಚುನಾವಣಾ ಪ್ರಕಿಯೆ ನಡೆಸಿ, ನೂತನ ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ಶಿರಸಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅಜಿತ್ ಅಣ್ಣಪ್ಪ ಶಿರಹಟ್ಟಿ, ಇದೊಂದು ಅಪರೂಪದ ಸಂಸ್ಥೆಯಾಗಿದೆ. ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳು, ಕ್ರೆಡಿಟ್ ಸೌಹಾರ್ಧ ಸಂಘಗಳು ಮುದ್ರಣಾಲಯಕ್ಕೆ ಶಕ್ತಿ ತುಂಬಿದಲ್ಲಿ ಸಂಸ್ಥೆ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷ ಸ್ಥಾನ ಅಲಂಕರಿಸಿ ಮಾತನಾಡಿದ ಜಿ.ಎಂ. ಹೆಗಡೆ ಹುಳಗೋಳ, ನಷ್ಟದಲ್ಲಿದ್ದ ಸಂಸ್ಥೆಯನ್ನು ಈ ಹಂತಕ್ಕೆ ತಂದಿದ್ದೇವೆ. ಸಂಘ-ಸಂಸ್ಥೆಗಳಿಗೆ ಅಗತ್ಯವಿರುವ ಎಲ್ಲ ಮುದ್ರಣ ಕಾರ್ಯವನ್ನು ಕನಿಷ್ಠ ಸಮಯದಲ್ಲಿ ಪೂರೈಸುವಷ್ಟು ಯಂತ್ರೋಪಕರಣಗಳನ್ನು ಸಂಘದಲ್ಲಿ ಅಳವಡಿಸಿದ್ದೇವೆ. ಜನಸಾಮಾನ್ಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ನೂತನ ಆಡಳಿತ ಮಂಡಳಿ ಸದಸ್ಯರು:
ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆಗೊಂಡ ನೂತನ ಆಡಳಿತ ಮಂಡಳಿಯಲ್ಲಿ ಹಿರಿಯ ಸಹಕಾರಿಗಳಾದ ಜಿ. ಟಿ. ಹೆಗಡೆ ತಟ್ಟೀಸರ, ಆರ್.ಎಸ್ ಭಟ್ಟ ನಿಡಗೋಡು, ಎನ್.ಆರ್. ಹೆಗಡೆ ಬುಗಡಿಮನೆ, ವಿಶ್ವನಾಥ ಹೆಗಡೆ ಕಲ್ಗದ್ದೆ, ಆರ್. ಎಸ್. ಹೆಗಡೆ ವಾಜಗದ್ದೆ, ಜಟ್ಟಪ್ಪ ಎಂ. ಮೊಗೇರ್ ಪುನರಾಯ್ಕೆಗೊಂಡರು. ನೂತನ ಸದಸ್ಯರಾಗಿ ಜಿ.ಆರ್. ಹೆಗಡೆ ಬೆಳ್ಳೇಕೇರಿ, ಸುರೇಶ ಹೆಗಡೆ ಹಕ್ಕಿಮನೆ, ವಿ.ಎನ್ ನಾಯ್ಕ ಬೇಡ್ಕಣಿ, ಸಾವೇರ ಲಿಯಾಂ ಡಿಸಿಲ್ವಾ, ಭಾರತಿ ಗಜಾನನ ಭಟ್ಟ, ಸುಮಾ ರಾಜು ಉಗ್ರಾಣಕರ ಆಯ್ಕೆಗೊಂಡರು.