Slide
Slide
Slide
previous arrow
next arrow

ಸಾಮಾಜಿಕ ಜಾಲತಾಣ ಪ್ರಭಾವ: ದಾನಿಗಳ ನೆರವಿನಿಂದ ಹೊಸ ಬದುಕಿನ ಹಾದಿ ತುಳಿದ ಯಲ್ಲಪ್ಪ

300x250 AD

ಸಂದೇಶ್ ಎಸ್.ಜೈನ್

ದಾಂಡೇಲಿ : ಕಳೆದ ಕೆಲವು ತಿಂಗಳುಗಳಿಂದ ಹದಗೆಟ್ಟಿದ್ದ ಗೂಡ್ಸ್ ಆಟೋದಲ್ಲಿಯೆ ಉಂಡು ತಿಂದು ಮಲಗುತ್ತಿದ್ದ ಯಲ್ಲಪ್ಪನವರ ಕಣ್ಣೀರ ಬದುಕಿನ ಬಗ್ಗೆ ನೋಡಿ ತಿಳಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ಸಿಬ್ಬಂದಿ ಮಹಾದೇವ ಅವರು ಇವರಿಗೆ ಏನನ್ನಾದರೂ ಮಾಡಬೇಕು, ಇವರ ಕಣ್ಣೀರನ್ನು ಒರೆಸುವ ನಿಟ್ಟಿನಲ್ಲಿ ಮುಂದಾಗಬೇಕೆಂದು ಹಂಬಲಿಸಿ, ಪಾರೀಕ್ ಅವರಿಗೆ ತಿಳಿಸುತ್ತಾರೆ. ತಡವರಿಯದೆ ಪಾರಿಕ್ ಅವರು ತನ್ನ ದಾಂಡೇಲಿ ದೈನಿಕ್ ಸಮಾಚಾರ್ ಯೂಟೂಬ್ ಚಾನೆಲಿನಲ್ಲಿ ಯಲ್ಲಪ್ಪ ಅವರ ಕಣ್ಣೀರ ಕಥೆಯ ಬಗ್ಗೆ ವರದಿಯನ್ನು ಪ್ರಸಾರ ಮಾಡಿದ್ದರು.

ವರದಿ ಪ್ರಸಾರವಾಗುತ್ತಿದ್ದಂತೆ ನಗರದ ಅನೇಕ ಸಹೃದಯಿಗಳು ಯಲ್ಲಪ್ಪರವರ ಯಾತನೆಯ ಬದುಕಿಗೆ ಸಹಾಯದ ಸ್ಪಂದನೆ ನೀಡಿದರು. ದಾನಿಗಳ ನೆರವಿನಿಂದ, ದಾಂಡೇಲಿ ಯುನೈಟೆಡ್ ಮುಸ್ಲಿಂ ಕಮಿಟಿ ಹಾಗೂ ಪವನ್ ಶಾ ನೇತೃತ್ವದ ಕಿಲಿಕಿಲಿ ವಾಟ್ಸಪ್ ಗ್ರೂಪಿನ ಸಕಾಲಿಕ ಸ್ಪಂದನೆಯ ಮೂಲಕ ಯಲ್ಲಪ್ಪರವರಿಗೆ ಬಾಡಿಗೆ ಮನೆಯನ್ನು ಒದಗಿಸಿಕೊಟ್ಟು, ಮನೆಗೆ ಬೇಕಾದ ಎಲ್ಲಾ ಪಾತ್ರೆಗಳನ್ನು ಸಾಮಾನು, ಸರಂಜಾಮುಗಳನ್ನು, ದಿನಸಿ ವಸ್ತುಗಳನ್ನು, ಬೆಡ್ ಶೀಟ್, ಚಾದರ ಹಾಗೂ ಯಲ್ಲಪ್ಪ ಅವರಿಗೆ ಬಟ್ಟೆ ಮತ್ತು ಅವರ ಮಗಳು ಕಾಶಿಗೂ ಬಟ್ಟೆ ಬರೆಗಳನ್ನು ನೀಡಿ, ಅಡುಗೆ ಅನಿಲ ಸಂಪರ್ಕವನ್ನು ಒದಗಿಸಿಕೊಟ್ಟು ನಿಜವಾದ ಮಾನವೀಯತೆಯನ್ನು ಮೆರೆದಿದ್ದಾರೆ.

ಒಂದು ರೀತಿಯಲ್ಲಿ ಹೊಸ ಬದುಕಿನತ್ತ ಹೆಜ್ಜೆ ಹಾಕಿದ ಯಲ್ಲಪ್ಪರವರಿಗೆ ಅವರ ಹದಗೆಟ್ಟಿದ್ದ ಗೂಡ್ಸ್ ಆಟೋದ ದುರಸ್ತಿ ಕಾರ್ಯಕ್ಕೆ ದಾಂಡೇಲಿ ಯುನೈಟೆಡ್ ಮುಸ್ಲಿಂ ಕಮಿಟಿ ಮುಂದಾಯಿತು. ಗೂಡ್ಸ್ ಆಟೋ  ದುರಸ್ತಿಗಾಗಿ ದಾಂಡೇಲಿ ಯುನೈಟೆಡ್ ಮುಸ್ಲಿಂ ಕಮಿಟಿ 10,000/- ಧನಸಹಾಯವನ್ನು ನೀಡಿತು. ದಾವಲ್ ಮೇಸ್ತ್ರಿ ಮತ್ತು ಹುಸೇನ್ ಮೇಸ್ತ್ರಿ ಇವರು ಈ ಹಣದೊಂದಿಗೆ ತಮ್ಮ‌ ಹಣವನ್ನು ಸೇರಿಸಿ ಜೊತೆಗೆ ಶ್ರಮವನ್ನು ಹರಿಸಿ ಗೂಡ್ಸ್ ಆಟೋ ದುರಸ್ತಿ ಕಾರ್ಯವನ್ನು ಮಾಡಿ ಮುಗಿಸಿದರು. ಗೂಡ್ಸ್ ಆಟೋಗೆ ಸಂಬಂಧಿಸಿದ ಇನ್ಸೂರೆನ್ಸ್ ಹಾಗೂ ಇನ್ನಿತರ ಕಾಗದ ಪತ್ರಗಳನ್ನು ನಗರದ ಬಾಬು ಡ್ರೈವಿಂಗ್ ಸ್ಕೂಲಿನ ಮಾಲಕರಾದ ಶಂಸುದ್ದೀನ್ ಹಾಗೂ ಅವರ ಗೆಳೆಯರ ಬಳಗವು ತಮ್ಮ ಸ್ವಂತ ಖರ್ಚಿನಿಂದ ಮಾಡಿಕೊಟ್ಟಿತು.

300x250 AD

ದುರಸ್ತಿಯಾಗಿ ಸಿದ್ದಗೊಂಡ ಗೂಡ್ಸ್ ಆಟೋವನ್ನು ಅದರ ಮಾಲಕ ಯಲ್ಲಪ್ಪ ಅವರಿಗೆ  ಮಂಗಳವಾರ ಹಸ್ತಾಂತರಿಸಲಾಯಿತು.

ಬಹಳ ಮುಖ್ಯವಾಗಿ ಸಾಧಿಕ್ ಮುಕಾಶಿ, ಜಾಫರ್ ಮಾಸನಕಟ್ಟಿ, ಶೌಕತ್ತಾಲಿ ದುಖಾಂದರ, ದಾದಪೀರ್ ನದೀಮುಲ್ಲಾ, ಶಮೀವುಲ್ಲಾ ಮುಕಾಶಿ, ಸಲೀಂ ಖಾನಪುರಿ, ಇಮ್ತಿಯಾಜ್ ಶೇಖ, ರಿಯಾಜ್ ಬಾಬು ಸೈಯದ್, ಯಾಸರ್ ಶೇಖ, ಸಾಧಿಕ್ ಮುಲ್ಲಾ, ಅಝರ್ ದೇಸೂರು, ನಿಜಾಮ್ ಶೇಖ, ಮೂನ್ ಶೇಖ, ಇಮ್ರಾನ್ ಶೇಖ, ಇಬ್ರಾಹಿಂ ಕಾಕರ,    ಡಾ.ವಾಸೀಕ್ ಅಹ್ಮದ್ ಮಳಗಿ, ವಸೀಂ ಅಹ್ಮದ್ ಮಳಗಿ, ದಾವಲ್ ಸಾಬ್ ನೀರಲಗಿ, ವಸೀಂ ಖಾನ್, ರಿಜ್ವಾನ್, ವಸೀಂ ಶೇಖ, ಜಿಲಾನಿ ಶೇಖ ಇವರನ್ನೊಳಗೊಂಡ ದಾಂಡೇಲಿ ಯುನೈಟೆಡ್ ಮುಸ್ಲಿಂ ಕಮಿಟಿಯ ಸಂಘಟನಾತ್ಮಕವಾದ ಸಹಾಯ, ಸ್ಪಂದನೆ ಶ್ಲಾಘನೀಯವಾಗಿದೆ.

ಗೂಡ್ಸ್ ಆಟೋ ಹಸ್ತಾಂತರ ಸಂದರ್ಭದಲ್ಲಿ ಮಹಮ್ಮದ್ ಗೌಸ್ ಬೆಟಗೇರಿ, ರಿಯಾಜ್ ಬಾಬು ಸೈಯದ್, ಶೌಕತಾಲಿ ದುಖಾಂದಾರ್, ಜಿಲಾನಿ ಶೇಖ, ಇಕ್ಬಾಲ್ ಮದನಿ ಮೆಡಿಕಲ್, ದಾವಲ್ ಮೇಸ್ತ್ರಿ, ಹುಸೇನ್ ಮೇಸ್ತ್ರಿ, ಮಹಮ್ಮದ್ ಗೌಸ್ ಪಟೇಲ್, ಶಂಸುದ್ದೀನ್ ಖತೀಬ್, ಉಬೇದ್ ಖಾನ್, ಫಾರೂಕ್ ಶೇಖ, ಸಾಧಿಕ್ ಮುಲ್ಲಾ, ಮೆಹಬೂಬ್ ಟೀ ಪಾಯಿಂಟ್, ರಫೀಕ್ ಮುಜಾವರ್, ಇಮ್ತಿಯಾಜ್ ಶೇಖ, ಇಸ್ಮಾಯಿಲ್ ಲಲ್ಲು ಪಾನ್ ಶಾಪ್, ಗಿರೀಶ್ ಜೈನ್ ಮೊದಲಾದವರು ಉಪಸ್ಥಿತರಿದ್ದು ಯಲ್ಲಪ್ಪರವರಿಗೆ ಶುಭವನ್ನು ಕೋರಿದರು.

Share This
300x250 AD
300x250 AD
300x250 AD
Back to top