ದಾಂಡೇಲಿ : ಬಿಜೆಪಿ ಓ.ಬಿ.ಸಿ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ವತಿಯಿಂದ ನಗರ ಸಭೆಯ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಹರ್ ಘರ್ ತಿರಂಗಾ ಅಭಿಯಾನದ ಪ್ರಯುಕ್ತ ಸ್ವಚ್ಛಗೊಳಿಸಲಾಯಿತು.
ಓ.ಬಿ.ಸಿ ಮೋರ್ಚಾ ಅಧ್ಯಕ್ಷರಾದ ರವಿ ಗಾಂವಕರ್ ಮಾತನಾಡಿ ಬಿಜೆಪಿ ಓ.ಬಿ. ಸಿ ಮೋರ್ಚಾ ಹಾಗೂ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಜನರ ಹೃದಯದಲ್ಲಿ ದೇಶಭಕ್ತಿಯ ಭಾವನೆ ಮತ್ತು ಭಾರತದ ರಾಷ್ಟ್ರ ಧ್ವಜದ ಬಗ್ಗೆ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಹರ ಘರ್ ತಿರಂಗಾ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ದಿನ ತಮ್ಮ ಜೀವನವನ್ನು ದೇಶಕ್ಕಾಗಿ ಮುಡುಪಾಗಿಟ್ಟ ಧೀಮಂತ ನಾಯಕ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಸ್ವಚ್ಛಗೊಳಿಸುತ್ತಿದ್ದೇವೆ ಎಂದರು. ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಾತ್ಮರು ತಮ್ಮ ಜೀವವನ್ನು ಸಮರ್ಪಿಸಿಕೊಂಡಿದ್ದಾರೆ. ಇಂದು ನಾವು ಸ್ವತಂತ್ರ ಭಾರತದ ಹೆಮ್ಮೆಯ ಪ್ರಜೆಗಳಾಗಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದೇವೆ ಎಂದಾದರೇ, ಅದಕ್ಕೆ ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪುಣ್ಯ ಪುರುಷರ ಮಹಾನ್ ತ್ಯಾಗವೇ ಕಾರಣ ಎಂದರು.
ಬಿಜೆಪಿ ಅಧ್ಯಕ್ಷರಾದ ಬುಧವಂತಗೌಡ ಪಾಟೀಲ್ ಮತ್ತು ಉಪಾಧ್ಯಕ್ಷರಾದ ಗುರು ಮಠಪತಿಯವರು ಮಾತನಾಡಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರದಾದ್ಯಂತ ಆ. 13 ರಿಂದ ಆ. 15 ರವರೆಗೆ ದೇಶದ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶಾಭಿಮಾನ ಬಿಂಬಿಸುವ ಅಭಿಯಾನವೇ ಹರ್ ಘರ್ ತಿರಂಗಾ ಅಭಿಯಾನ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಓ.ಬಿ.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ ಬುಲಬುಲೆ ಮತ್ತು ಪ್ರಮೋದ್ ಕದಂ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ನೇಮತಿ, ಪಕ್ಷದ ಪ್ರಮುಖರಾದ ಸುಧಾಕರ್ ರೆಡ್ಡಿ, ಗೀತಾ ಶಿಕಾರಿಪುರ, ರೂಪೇಶ್ ಪವಾರ, ತುಕಾರಾಂ ಬಿಂಗೆ, ಸುಭಾಷ್ ಮಿಶಾಲೆ, ಹನುಮಂತ ಕಾರ್ಗಿ,ಅರ್ಜುನ ಮಾನೆ, ಶಿವಾನಂದ ಮಚಾಕನವರ, ಮಂಜು ಶೆಟ್ಟಿ, ಮಂಜು ಯರಗೇರಿ, ಲಕ್ಷ್ಮಣ ಜಾದವ, ಅಪ್ಪಾರಾವ ಕಾಂಬಳೆ, ದೇವಕ್ಕ ಕೆರೇಮನಿ, ಸುಜಾತಾ ಜಾದವ, ಪದ್ಮಜಾ ಜನ್ನು, ರಮಾ ರವೀಂದ್ರ, ಅನ್ನಪೂರ್ಣ ಬಾಗಲಕೋಟೆ, ಶೋಭಾ ಜಾಧವ ಸುನೀತಾ ಬೈರೂಡಗಿ, ಮಂಗಲಾ ನಾಯ್ಕ, ಮಹಾದೇವಿ ಭತ್ತಿ, ಓ.ಬಿ.ಸಿ.ಮೋರ್ಚಾ ಹಾಗೂ ಮಹಿಳಾ ಮೋರ್ಚಾದ ಸದಸ್ಯರು ಉಪಸ್ಥಿತರಿದ್ದರು.