Slide
Slide
Slide
previous arrow
next arrow

ರಾಷ್ಟ್ರಮಟ್ಟದಲ್ಲಿ ಚಿನ್ನ ಗೆದ್ದ ಲಯನ್ಸ್ ಬಾಲೆ

300x250 AD

ಶಿರಸಿ: ನಗರದ ಲಯನ್ಸ ಶಾಲೆಯಲ್ಲಿ 6ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕು.ಖುಷಿ ಸಾಲೇರ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಹಾಕಿ ವಿಭಾಗದಲ್ಲಿ ಚಿನ್ನದ ಸಾಧನೆ ಮೆರೆದಿದ್ದಾಳೆ.

ಇತ್ತೀಚೆಗೆ ಕೋಯಿಮುತ್ತೂರಿನಲ್ಲಿ ನಡೆದ ಇಂಡಿಯಾ ಸ್ಕೇಟ್ ರಾಷ್ಟ್ರಮಟ್ಟದ ರೋಲರ್ ಸ್ಕೇಟಿಂಗ್ ಹಾಕಿ ಗುಂಪಿನಲ್ಲಿ ಈಕೆ ಕರ್ನಾಟಕ ತಂಡದಲ್ಲಿದ್ದು, ಈ ತಂಡ ಚಿನ್ನದ ಸಾಧನೆ ಮೆರೆದಿದೆ. ತರಬೇತುದಾರರಾದ ದಿಲೀಪ ಹಣಬರ ಹಾಗೂ ಸಹಾಯಕ ತರಬೇತುದಾರರರಾದ ಮಂಜಪ್ಪ ನಾಯ್ಕ ಇವರ ತರಬೇತಿ ಮೂಲಕ ಈ ಸಾಧನೆ ತೋರಿದ್ದಾಳೆ. ಸಾಧನೆ ತೋರಿದ ವಿದ್ಯಾರ್ಥಿನಿಗೆ, ಅವರ ಪಾಲಕರಿಗೆ ಹಾಗೂ ತರಬೇತುದಾರರಿಗೆ ಶಿರಸಿ ಲಯನ್ಸ್ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ, ಶಿರಸಿ ಲಯನ್ಸ ಶಾಲಾ ಹಾಗೂ ಕಾಲೇಜು ಸಮೂಹದ ಪ್ರಾಂಶುಪಾಲರು, ಶಿಕ್ಷಕ-ಶಿಕ್ಷಕೇತರ ವೃಂದ, ಪಾಲಕ ಬಳಗ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದೆ.

300x250 AD
Share This
300x250 AD
300x250 AD
300x250 AD
Back to top