Slide
Slide
Slide
previous arrow
next arrow

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಲ್ಲ ಸ್ತರದ ಜನತೆಗೆ ನೆರವು ನೀಡಿದೆ: ಜಿ.ಯು.ಭಟ್

300x250 AD

ಹೊನ್ನಾವರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಮಾಜದ ಎಲ್ಲಾ ಸ್ತರದ ಜನತೆಗೆ ನೆರವು ನೀಡಿದೆ. ಪ್ರವಾಹಭಾದಿತವಾದ ಊರಿನ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಹಲವಾರು ಶೈಕ್ಷಣಿಕ ಸಂಸ್ಥೆ ನಿರ್ಮಿಸಿದ್ದಾರೆ.ಅನ್ನದಾನ,ಶಿಕ್ಷಣ ದಾನ,ಅಭಯದಾನ ಎಲ್ಲಾ ರೀತಿಯ ದಾನ ನೀಡಿದ್ದಾರೆ.ಕರೋನಾ ಸಮಯದಲ್ಲಿ ಜನಕ್ಕೆ ಸಹಾಯ ಮಾಡಿದ್ದಾರೆ. ಧರ್ಮಸ್ಥಳ ಯೋಜನೆಯ ಫಲಾನುಭವಿ ಅಲ್ಲದವರಿಗೂ ಸಹಾಯಹಸ್ತ ನೀಡಿದ್ದಾರೆ ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಹೇಳಿದರು.

ಸುಜ್ಞಾನನಿಧಿ ಶಿಷ್ಯವೇತನ ಯೋಜನೆ ಸಂದರ್ಭದಲ್ಲಿ ಮಾತನಾಡಿ, 141ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಒದಗಿಸಿದ್ದಾರೆ. 14 ಶಾಲೆಗಳಿಗೆ ಶಿಕ್ಷಕರನ್ನು ನೀಡಿದ್ದಾರೆ. ವಿಶಾಲವಾದ ಮನೋಭಾವನೆಯಿಂದ ಸುಜ್ಞಾನನಿಧಿ ಯೋಜನೆ ಜಾರಿಗೆ ತಂದಿದ್ದಾರೆ. ಶಾಲಾಕಟ್ಟಡ, ದೇವಸ್ಥಾನ ಹೀಗೇ ಎಲ್ಲಾ ಧರ್ಮಕಾರ್ಯಗಳಿಗೂ ಸಹಾಯಹಸ್ತ ನೀಡಿದ್ದಾರೆ. ಧರ್ಮವನ್ನು, ದೇವರನ್ನು ಸಮಾಜಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು ಎನ್ನುವುದನ್ನು ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ.ತುಂಬಾ ಸರಳವಾಗಿ ಬದುಕನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಪೂಜ್ಯರ ಸಾಮಾಜಿಕ ಚಟುವಟಿಕೆಗಳು ಹೀಗೆ ವಿಸ್ತಾರವಾಗಲಿ ಎಂದು ಶುಭಹಾರೈಸಿದರು.

ವಾಸಂತಿ ಅಮಿನ್ ಮಾತನಾಡಿ, ಧರ್ಮಸ್ಥಳ ಸಂಘ ರಚನೆ ಮಾಡಿ ಬೇರೆಬೇರೆ ರೀತಿಯಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಮಾಶಾಸನ,ಜನಮಂಗಲ ಕಾರ್ಯಕ್ರಮದಡಿ ವಿಲ್ ಚೇರ್ ,ವಾಟರ್ ಬೆಡ್ ನೀಡುತ್ತಿದ್ದೆವೆ. ಸುಜ್ಞಾನನಿಧಿ ಮೂಲಕ ವಿದ್ಯಾರ್ಥಿಗಳಿಗೆ ಶಿಷ್ಯವೇತನ,ದೇವಾಲಯದ ಜಿರ್ಣೋದ್ದಾರ ಕಾರ್ಯಗಳಿಗೆ ಧನಸಹಾಯ ನೀಡಲಾಗಿದೆ. ಕಾರ್ಯಕ್ರಮದ ಪ್ರಯೋಜನ ಎಲ್ಲರು ಪಡೆದುಕೊಳ್ಳಬೇಕು.ಶಿಕ್ಷಣದ ಉದ್ದೇಶಕ್ಕೆ ಶಿಷ್ಯವೇತನಕ್ಕೆ ಬಳಕೆಮಾಡಿಕೊಳ್ಳಿ ಎಂದು ಕರೆ ನೀಡಿದರು.

300x250 AD

ಶಿಕ್ಷಣ ಇಲಾಖೆಯ ಅರುಣಕುಮಾರ್ ಮಾತನಾಡಿ, ಜ್ಞಾನದೀಪ ಕಾರ್ಯದ ಮೂಲಕ ಶಿಕ್ಷಣದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಇದಕ್ಕಾಗಿ ನಾವು ಶಿಕ್ಷಣ ಇಲಾಖೆಯ ಪರವಾಗಿ ಅಭಿನಂಧಿಸುತ್ತೇನೆ ಎಂದರು. ಜತೆಗೆ ಮಧ್ಯವರ್ಜನ ಶಿಬಿರ ಮಾಡಿ ವ್ಯಸನಮುಕ್ತಸಮಾಜ ನಿರ್ಮಾಣಕ್ಕೆ ಪೂಜ್ಯರು ಪಣತೊಟ್ಟಿದ್ದಾರೆ. ವಿದ್ಯಾರ್ಥಿಗಳು ಸುಜ್ಞಾನನಿಧಿಯ ಪ್ರಯೋಜನ ಪಡೆದುಕೊಳ್ಳಿ ಎಂದು ಕರೆನೀಡಿದರು.

ಪಪಂ ಸದಸ್ಯ ಶಿವರಾಜ ಮೇಸ್ತ ಮಾತನಾಡಿ,
ಆಡುಮುಟ್ಟದ ಸೊಪ್ಪಿಲ್ಲ ,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಾಡದ ಕಾರ್ಯಕ್ರಮಗಳಿಲ್ಲ.ಇದೊಂದು ಅಕ್ಷಯಪಾತ್ರೆ ಇದ್ದಹಾಗೆ. ಇನ್ನಷ್ಟು ಯೋಜನೆಗಳು ನೀಡುವಂತಾಗಲಿ ಎಂದರು. ಚಂದ್ರಭಾಗಿ ಕಾರ್ಯಕ್ರಮ ನಿರ್ವಹಿಸಿದರು.ಸೇವಾಪ್ರತಿನಿಧಿ ಮಂಜುಳಾ ವಂದಿಸಿದರು.

Share This
300x250 AD
300x250 AD
300x250 AD
Back to top