Slide
Slide
Slide
previous arrow
next arrow

ಕ್ಯಾಸಲ್ ರಾಕ್ ಬಳಿ ಹಳಿ ತಪ್ಪಿದ ರೈಲು: ತಪ್ಪಿದ ಭಾರೀ ದುರಂತ

300x250 AD

ಜೋಯಿಡಾ: ಕ್ಯಾಸಲ್ ರಾಕ್ ಬಳಿ ರೇಲ್ವೆ ಮಾರ್ಗದಲ್ಲಿ ರೈಲೊಂದು ಹಳಿ ತಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.

ದೂದ್ ಸಾಗರ್ ಹಾಗೂ ಸೋನಾಲಿಯಂ ಸ್ಟೇಷನ್ ನಡುವೆ ಈ ಘಟನೆ ನಡೆದಿದ್ದು ಕಲ್ಲಿದ್ದಲು ಹೊತ್ತ ರೈಲಿನ ಸುಮಾರು 11 ಬೋಗಿ ಕೆಳಕ್ಕೆ ಜಾರಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ.

ರೈಲ್ವೆ ದುರಂತದಿಂದಾಗಿ ಸಂಜೆ ಹೋರಡುವ ವಾಸ್ಕೊ ನಿಜಾಮುದ್ದಿನ್‌ಗೆ ತೆರಳುವ ವಾಹನದ ಮಾರ್ಗ ಬದಲಾಯಿಸುವ ಸಾಧ್ಯತೆ ಇದೆ. ಅದರಂತೆ ಹುಬ್ಬಳ್ಳಿ, ಬೆಳಗಾವಿ, ಗೋವಾ ರೈಲು ಸಂಚಾರದಲ್ಲೂ ವ್ಯತ್ಯಯವಾಗಲಿದೆ.

300x250 AD

ಈ ಘಟನೆಯಿಂದಾಗಿ ಮಡಗಾಂವನಿಂದ ಬೆಳಗಾವಿ ಮತ್ತು ಹುಬ್ಬಳ್ಳಿ ಕಡೆ ತೆರಳುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ನೈಋತ್ಯ ವಲಯದ ಹುಬ್ಬಳ್ಳಿ ವಿಭಾಗದಲ್ಲಿ ಈ ಘಟನೆ ನಡೆದಿದೆ.

Share This
300x250 AD
300x250 AD
300x250 AD
Back to top