Slide
Slide
Slide
previous arrow
next arrow

ದೇವಳಮಕ್ಕಿ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ ಇಂಗ್ಲಿಷ್ ತರಗತಿ ಪ್ರಾರಂಭ

300x250 AD

ಕಾರವಾರ : ತಾಲೂಕಿನ ದೇವಳಮಕ್ಕಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭಗೊಂಡಿರುವ ಎಲ್‌ಕೆಜಿ ಇಂಗ್ಲಿಷ್ ಮಾಧ್ಯಮದ ತರಗತಿಯನ್ನು ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಮಂಗಳವಾರದಂದು ಉದ್ಘಾಟಿಸಿದರು.

ಶಾಸಕ ಸತೀಶ್ ಸೈಲ್ ಮಾತನಾಡಿ ದೇವಳಮಕ್ಕಿ ಗ್ರಾಮ ಅಂದ್ರೆ ದೇವರ ಪ್ರದೇಶದ ಗ್ರಾಮವಾಗಿದೆ. ಈ ಗ್ರಾಮದ ಶಾಲೆಯ ಆವರಣದ ಮೈದಾನ ಸುಂದರವಾಗಿ ವಿಶಾಲವಾಗಿದೆ. ಶಾಲೆಯ ಸರ್ವತೋಮುಖ ಮತ್ತಷ್ಟು ಅಭಿವೃದ್ಧಿಗೆ ಸದಾ ಕೈ ಜೋಡಿಸುತ್ತನೆ ಎಂದು ಹೇಳಿ ಕೆಲ ಕಾಲ ತಮ್ಮ ಸಮಯವನ್ನು ಎಲ್ ಕೆ ಜಿ ವಿದ್ಯಾರ್ಥಿಗಳ ಜೊತೆ ಪ್ರಶ್ನೆಗಳನ್ನು ಕೇಳುವುದರ ಮೂಲಕ ಇಂಗ್ಲಿಷ್ ಪಾಠವನ್ನು ಮಾಡಿದರು.

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳಮಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಗೌಡ ವಹಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್ ಗಾಂವಕಾರ, ಸುವರ್ಣ ಗೌಡ, ಪ್ರತಿಕ್ಷಾ ವೈಂಗಣಕರ ,ಪಿಡಿಒ ರಘುನಂದನ್, ಎಸ್ ಡಿ ಎಂ ಸಿ ಅಧ್ಯಕ್ಷ ಭಾಗ್ಯ ಭಟ್ಟ, ಉಪಾಧ್ಯಕ್ಷ ಶ್ರೀಕಾಂತ್ ಗೌಡ, ಸದಸ್ಯ ದೀಪಕ ಹಳದೀಪುರ,ಸಿ ಆರ್ ಪಿ ಅಶೋಕ್ ಬಾಡಕರ, ಕಾಂಗ್ರೆಸ್ ಮುಖಂಡರಾದ ಪ್ರಶಾಂತಿ ನಾಯ್ಕ, ವಿಲಾಸ ಆಚಾರಿ, ಸದಾನಂದ ಬಾಂದೇಕರ, ಘನಶ್ಯಾಮ ಬಾಂದೇಕರ, ಸಚಿನ್ ಮಹಾಲೆ, ಪ್ರಭಾರಿ ಮುಖ್ಯ ಶಿಕ್ಷಕಿ ಎಲ್ಸಿ ಅಲ್ಮೇಡಾ, ಸಹ‌ ಶಿಕ್ಷಕರು, ಎಸ್ ಡಿ ಎಂ ಸಿ ಸದಸ್ಯರುಗಳು , ವಿದ್ಯಾರ್ಥಿಗಳು,ಪಾಲಕ ಪೋಷಕರು, ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top