ಶಿರಸಿ: ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿ ದಿಗಂತ್ ಹೆಗಡೆ ಮಾದನಕಳ್ ಬೆಂಗಳೂರಿನ ಸಿಲಿಕಾನ್ ಸಿಟಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ಹವ್ಯಕ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 16 ವರ್ಷ ವಯೋಮಿತಿಯ ಸಿಂಗಲ್ಸ್ ನಲ್ಲಿ ಪ್ರಥಮ, ಮಿಕ್ಸೆಡ್ ಡಬಲ್ಸ್ ನಲ್ಲಿ ಪ್ರಥಮ ಹಾಗೂ ಒಬ್ಬರು ೪೦ ವಯೋಮಾನದ ಆಟಗಾರರು ಇರುವ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾನೆ. ಈತ ಪ್ರಿಯಾ ಹೆಗಡೆ ಹಾಗೂ ಸುಧಾಕರ ಹೆಗಡೆ ಪುತ್ರನಾಗಿದ್ದು, ಇವನು ಗುರುರಾಜ ಹೆಗಡೆ ಅವರ ಬಳಿ ತರಬೇತಿ ಪಡೆಯುತ್ತಿದ್ದಾನೆ.