ಶಿರಸಿ: ಪ್ರತಿವರ್ಷದಂತೆ ಈ ವರ್ಷವೂ ಶಿರಸಿಯ ಸಾಂತ್ವನ ಮಹಿಳಾ ವೇದಿಕೆಯಿಂದ ಕೊಡಮಾಡುವ, ಪಾರ್ವತಿವೈದ್ಯ ದತ್ತಿನಿಧಿಯ ಸಹಾಯಧನವನ್ನು ನೀಡಲು ನಿಶ್ಚಯಿಸಲಾಗಿದೆ.
ಶಿರಸಿ ತಾಲೂಕಿನ ವಿಕಲಚೇತನ ಮಹಿಳೆಯರು ಪಾರ್ವತಿವೈದ್ಯ ದತ್ತಿನಿಧಿಯ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಶಿರಸಿ ತಾಲೂಕಾ ವ್ಯಾಪ್ತಿಯಲ್ಲಿ ಬರುವ ವಿಕಲಚೇತನ ಮಹಿಳಾಸಕ್ತರು ಅಗಸ್ಟ್ 20 ರೊಳಗಾಗಿ ತಮ್ಮ ದಾಖಲಾತಿಗಳೊಂದಿಗೆ, ಈ ಕೆಳಗೆ ನೀಡಿದ ವಿಳಾಸಕ್ಕೆ ಅರ್ಜಿಸಲ್ಲಿಸ ಬೇಕಾಗಿ ವಿನಂತಿಸಲಾಗಿದೆ. ಅರ್ಹ ಮಹಿಳೆಗೆ ಅಗಸ್ಟ್ 29 ರಂದು ನಡೆಯುವ ಸಾಂತ್ವನ ಮಹಿಳಾ ವೇದಿಕೆ(ರಿ)ಯ ವಾರ್ಷಿಕ ಮಹಾ ಸಭೆಯಲ್ಲಿ ಸಹಾಯಧನವನ್ನು ವಿತರಿಸಲಾಗುತ್ತದೆ.
ಸಹಾಯಧನದ ಆಸಕ್ತ ವಿಕಲಚೇತನ ಮಹಿಳೆಯರು ತಮ್ಮ ಭಾವಚಿತ್ರ,ಆಧಾರಕಾರ್ಡ್ ಪ್ರತಿ ಹಾಗೂ ವಿಕಲತೆಯ ಕುರಿತಾದ ವೈದ್ಯಕೀಯ ಪ್ರಮಾಣಪತ್ರದೊಂದಿಗೆ ಅಂಚೆಯ ಮೂಲಕ ಅಥವಾ ಖುದ್ದಾಗಿ ಮಹಿಳಾ ಸಾಂತ್ವನ ಸಹಾಯವಾಣಿ ಕಛೇರಿಗೆ ಬಂದು ಅರ್ಜಿಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ: ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರ, ರಾಜ್ಯಸಹಕಾರಿ ನೌಕರರ ಸಂಘದ ಕಟ್ಟಡದ ಮೊದಲ ಮಹಡಿ, ತೋಟಗಾರಿಕಾ ಇಲಾಖೆಯ ಎದುರು, ಶಿರಸಿ ಎಂದಾಗಿರುತ್ತದೆ. ದೂರವಾಣಿ ಸಂಖ್ಯೆ- Tel:+9108384225177 ಸಂಪರ್ಕಿಸಬಹುದಾಗಿದೆ.