ಶಿರಸಿ : ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಅನುಷ್ಟಾನಕ್ಕೆ ಸಂಬಂಧಿಸಿ ಆರುನೇ ಕರಡು ಅಧಿಸೂಚನೆ ಪ್ರಕಟಿಸಿದಂತೆ, ಪರಿಸರ ಸೂಕ್ಷ್ಮ ಪ್ರದೇಶದ ರಾಜ್ಯ ಸರ್ಕಾರ ಯತ್ತಾವತ್ ಆಗಿ ಒಪ್ಪಿದಲ್ಲಿ ರಾಜ್ಯದಲ್ಲಿ,ಲಕ್ಷಾಂತರ ಅರಣ್ಯವಾಸಿ ಕುಟುಂಬಗಳು ಅತಂತ್ರವಾಗುವ ಭೀತಿಯಲ್ಲಿ ಇದ್ದಾರೆಂದು ರಾಜ್ಯ ಅರಣ್ಯ ಭೂಮಿ ಹೋರಾಟಗಾರರ ವೇದಿಕೆ ಅದ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನೈಜ ಮಾನವನ ನೈಸರ್ಗಿಕ ಜೀವನಕ್ಕೆ ಆತಂಕ ಉಂಟಾಗುವುದಲ್ಲದೇ, ನಿರ್ಬಂಧಿತ ಸಾಮಾಜಿಕ ಜೀವನ ನಿಷೇಧಿಸಲ್ಪಡುತ್ತದೆ. ಅಲ್ಲದೇ ಅನಧೀಕೃತ ಸಾಗುವಳಿದಾರರಿಗೆ ಅರಣ್ಯ ಭೂಮಿಯಿಂದ ಕಾನೂನಾತ್ಮಕವಾಗಿ ಕಾಲಮಾನದಂಡದಡಿಯಲ್ಲಿ ಒಕ್ಕಲೆಬ್ಬಿಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯದ 10 ಜಿಲ್ಲೆಯ 1531 ಗ್ರಾಮಗಳಲ್ಲಿ ಸುಮಾರು 2 ಲಕ್ಷದಷ್ಟು ಅರಣ್ಯವಾಸಿ ಕುಟುಂಬ ಮತ್ತು ಉಪ ಕುಟುಂಬವು ಅರಣ್ಯ ಭೂಮಿಯನ್ನ ಅವಲಂಬಿತರಾಗಿದ್ದಾರೆ. ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ಇವರ ಅರ್ಜಿಗಳು ಪುನರ್ ಪರೀಶೀಲಿಸುವ ಹಂತದಲ್ಲಿ ಇದೆ. ನೀರ್ಭಂದಿತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅನಧಿಕೃತ ಸಾಗುವಳಿಗಾರರಿಗೆ ಜೀವಿಸಲೂ ಅವಕಾಶವಿಲ್ಲದಿರುವುದರಿಂದ ಅತಂತ್ರವಾಗುವ ಭೀತಿಯನ್ನು ಎದುರಿಸುತ್ತಿದ್ದಾರೆಂದು ಅವರು ಹೇಳಿದರು.
ಉತ್ತರಕನ್ನಡ ನಿರಾಶ್ರಿತರ ಜಿಲ್ಲೆ:
ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ 604 ಜಿಲ್ಲೆ ಸೇರಲ್ಪಟ್ಟಿದೆ. ಜಿಲ್ಲೆಯಲ್ಲಿ ವಾಸಿಸುತ್ತಿರುವ ಅನಧಿಕೃತ ಸುಮಾರು 80 ಸಾವಿರ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬೇಕಾಯಿತು.ಈ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆಯಾದರೆ ಎಲ್ಲ ಅನಧೀಕೃತ ಅರಣ್ಯವಾಸಿಗಳನ್ನ ಒಕ್ಕಲೇಬ್ಬಿಸುವ ಜೊತೆಯಲ್ಲಿ ಉತ್ತರಕನ್ನಡ ಜಿಲ್ಲೆ ನಿರಾಶ್ರೀತರ ಜಿಲ್ಲೆ ಆಗುವುದರಲ್ಲಿ ಯಾವೂದೇ ಸಂಶಯವಿಲ್ಲ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.