ಭಟ್ಕಳ: ಮುಖ್ಯೋಪಾಧ್ಯಯಕರ ಹುದ್ದೆಗೆ ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಬಡ್ತಿ ನೀಡಬೇಕು. ವರ್ಗಾವಣೆ ಸಮಯದಲ್ಲಿ ೬-೭ನೇ ತರಗತಿಯ ಖಾಲಿ ಹುದ್ದೆಗೆ ಪಿ.ಎಸ್.ಟಿ ಶಿಕ್ಷಕರಿಗೆ ಅವಕಾಶ ನೀಡಬೇಕು.
೨೦೧೭ರ ವೃಂದ ಮತ್ತು ನೇಮಕಾತಿ ನಿಯಮ ಬದಲಾವಣೆ, ಪಿ.ಎಸ್.ಟಿ ಶಿಕ್ಷಕರಿಗೆ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು ಎಂದು ಭಟ್ಕಳ ಸರ್ಕಾರಿ ಸಂಘದ ಅಧ್ಯಕ್ಷ ಮೋಹನ ನಾಯ್ಕ ಆಗ್ರಹಿಸಿದರು.
ಶನಿವಾರ ಸಂಜೆ ಭಟ್ಕಳಕ್ಕೆ ಆಗಮಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ನೀಡಿದರು. ಇದಕ್ಕೆ ಉತ್ತರಿಸದ ಸಚಿವರು ಇವೆಲ್ಲಾ ನಮ್ಮ ಗಮನಕ್ಕೆ ಇದ್ದು ಆಯುಕ್ತರ ಬಳಿ ಚರ್ಚಿಸಿ ಶಿಕ್ಷಕರಿಗೆ ಅನುಕೂಲವಾಗುವಂತೆ ನಿಯಮ ತಿದ್ದುಪಡಿ ಮಾಡುತ್ತೇವೆ. ಏಳನೇ ವೇತನ ಆಯೋಗ ನಮ್ಮ ಸರ್ಕಾರ ಹೇಳಿದಂತೆ ನಡೆದುಕೊಂಡಿದೆ. ಮುಂದೆ ಆರೋಗ್ಯ ಸಂಜೀವಿನಿ ಹಾಗೂ ಎನ್ .ಪಿ.ಎಸ್ ಅನ್ನುಒ.ಪಿ.ಎಸ್ ಮಾಡುವಂತಹದ್ದು ನಮ್ಮ ಸರ್ಕಾರದ ಮುಂದಿದೆ. ಅನುದಾನಿತ ಶಾಲೆಯ ಶಿಕ್ಷಕರ ನೇಮಕಾತಿ ೨೦೨೦ರ ಪೂರ್ವದಲ್ಲಿ ಇದ್ದ ಖಾಲಿ ಹುದ್ದೆಯ ಭರ್ತಿಗೆ ಅವಕಾಶ ನೀಡಲು ಆದೇಶ ಮಾಡಲಾಗಿದೆ. ಹಂತ ಹಂತವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು.
ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಮಸ್ಯೆಯ ಬಗ್ಗೆ ತಿಳಿಸಿದಾಗ ಪರಿಹರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ನೌಕರ ಸಂಘದ ಸದಸ್ಯರಾದ ಕೇಶವ ಮೊಗೇರ, ಸಿ.ಡಿ ಪಡುವಣಿ, ಶಿಕ್ಷಕ ರಾಮಗೌಡ , ಶಂಕರ್ ನಾಯ್ಕ್, ಶ್ವೇತಾ ನಾಯ್ಕ, ಹರೀಶ್ ಗೌಡ , ಪ್ರವೀಣ್ ರಾಥೋಡ್, ಮಹೇಶ್ ನಾಯ್ಕ ಇತರರು ಹಾಜರಿದ್ದರು