ಕುಮಟಾ: ಅಳ್ವೆಕೊಡಿಯ ಶಾಂತಾ ನರೋನಾ (65) ಎಂಬಾತರು ಮನೆಯವರ ಮೇಲಿನ ಮುನಿಸಿನಿಂದ ಮರಕ್ಕೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ.
ಅಳ್ವೆಕೊಡಿ ಕಲಭಾಗದ ಶಾಂತಾ ನರೋನಾ ವಿಪರೀತ ಸರಾಯಿ ಕುಡಿಯುತ್ತಿದ್ದರು. ಮದ್ಯ ಸೇವನೆ ಮಾಡದಂತೆ ಅವರ ಪತ್ನಿ ಬುದ್ದಿ ಹೇಳಿದ್ದರು. ಇದೇ ವಿಷಯವಾಗಿ ಜು.30ರಂದು ಹೆಂಡತಿ ಜೊತೆ ಜಗಳ ನಡೆದಿತ್ತು. ಅದೇ ದಿನ ಮನೆಬಿಟ್ಟು ಹೋಗಿದ್ದ ಅವರು ಎಲ್ಲಿಯೂ ಪತ್ತೆಯಾಗಿರಲಿಲ್ಲ. ಆ.3ರಂದು ಮನೆ ಪಕ್ಕದ ಜಮೀನಿನಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆಂದು ವರದಿಯಾಗಿದೆ.