ಹೊನ್ನಾವರ: ತಾಲೂಕಿನ ಚಂದಾವರದ ಹನುಮಂತ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಒಂದು ಕೋಟಿ ರಾಮನಾಮ ಜಪ ಕಾರ್ಯಕ್ರಮ ನಡೆಯಲಿದೆ.
ಆ.5ರಂದು ಒಂದು ಕೋಟಿ ರಾಮನಾಮ ಜಪ ಸಂಕಲ್ಪ ನಡೆಯಲಿದ್ದು, ಆ.31ರಂದು ರಾಮತಾರಕ ಹವನದೊಂದಿಗೆ ಮುಕ್ತಾಯಗೊಳ್ಳಲಿದೆ. ಹವನ ದಿನದಂದು ಅನ್ನಸಂತರ್ಪಣೆ ಕಾರ್ಯಕ್ರಮವು ಆಯೋಜನೆಗೊಂಡಿದೆ.
ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸರ್ವರೂ ಭಾಗಿಯಾಗಬಹುದಾಗಿದ್ದು, ಪ್ರತಿನಿತ್ಯ ತಮ್ಮ ಮನೆಗಳಲ್ಲೇ ರಾಮ ನಾಮ ಜಪವನ್ನು ಮಾಡಿ ನಿತ್ಯ ಜಪದ ಸಂಖ್ಯೆಯನ್ನು ಸತೀಶ್ ಚಂದಾವರ (Tel:+918105655659) ಇವರಿಗೆ ವಾಟ್ಸಾಪ್ ಮಾಡಿ ತಿಳಿಸಲು ಕೋರಲಾಗಿದೆ.