ಯಲ್ಲಾಪುರ: ಪಟ್ಟಣದಿಂದ ಮಾಗೋಡಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಹಲಸಖಂಡ-ಹುಲೆಕೋಣೆ ಮೂಲಕ ಹೋಗುವಂತೆ ಬದಲಾಯಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹೆಸ್ಕಾಂ ಎಇಇ ರಮಾಕಾಂತ ನಾಯ್ಕ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಪ್ರಸ್ತುತ ಇರುವ ವಿದ್ಯುತ್ ಮಾರ್ಗ ಗಣಪತಿಗಲ್ಲಿ, ಅಜ್ಜಪ್ಪನಕೆರೆ ಮೂಲಕ ಬೃಹತ್ ಮರಗಳು, ಪೊದೆಗಳು, ಕೊಳಚೆ ಪ್ರದೇಶದಿಂದ ದುರ್ಗಮ ಹಾದಿಯಲ್ಲಿ ಸಾಗಿ ಬಂದಿದೆ. ಮಳೆಗಾಲದಲ್ಲಿ ಗಾಳಿ, ಮಳೆ ಜೋರಾದರೆ ಈ ಮಾರ್ಗದಲ್ಲಿ ಫಾಲ್ಟ್ ಬರುವುದು ಹೆಚ್ಚು. ಅದನ್ನು ಬೇಗ ಸರಿಪಡಿಸುವುದೂ ಕಷ್ಟ. ಕಾರಣ ಹಲಸಖಂಡ-ಹುಲೆಕೋಣೆ ಮೂಲಕ ಈ ಮಾರ್ಗವನ್ನು ಬದಲಿಸಿದರೆ ಅನುಕೂಲವಾಗಬಹುದು ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಮನವಿ ಸ್ವೀಕರಿಸಿದ ಹೆಸ್ಕಾಂ ಎಇಇ ರಮಾಕಾಂತ ನಾಯ್ಕ, ಸೆಕ್ಷನ್ ಅಧಿಕಾರಿ ಲಕ್ಷ್ಮಣ ಜೋಗಳೆಕರ್ ಪ್ರತಿಕ್ರಿಯಿಸಿ, ಗ್ರಾಹಕರ ಆಶಯದಂತೆ ಮಾರ್ಗ ಬದಲಾವಣೆ ಮಾಡಿಕೊಡುವ ಭರವಸೆ ನೀಡಿದರು.
ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಟಿಎಂಎಸ್ ನಿರ್ದೇಶಕ ವೆಂಕಟರಮಣ ಭಟ್ಟ ಕಿರಕುಂಭತ್ತಿ, ಮಾಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ನರಸಿಂಹ ಭಟ್ಟ ಕುಂಕಿಮನೆ, ಎಲ್.ಎಸ್.ಎಂ.ಪಿ ನಿರ್ದೇಶಕ ಎಂ.ಎನ್.ಭಟ್ಟ, ಪ್ರಮುಖರಾದ ರಾಮಕೃಷ್ಣ ಕವಡಿಕೆರೆ, ಸೀತಾರಾಮ ಭಟ್ಟ, ಗುರುಪ್ರಸನ್ನ ಭಟ್ಟ, ಗುರುಪ್ರಸಾದ ಭಾಗ್ವತ, ಗಣೇಶ ಹೆಗಡೆ, ಲಕ್ಷ್ಮೀನಾರಾಯಣ ಭಟ್ಟ ತೋಟ್ಮನೆ, ಸುಬ್ಬಣ್ಣ ಕಂಚಗಲ್, ಸುಬ್ರಾಯ ಹೆಗಡೆ ಕೋಡ್ನಗುಡ್ಡೆ, ಗೋಪಣ್ಣ ಮೊಟ್ಟೆಪಾಲ, ಮಂಜುನಾಥ ನಾಯ್ಕ, ನರಸಿಂಹ ಭಟ್ಟ ಇತರರಿದ್ದರು.