ಯಲ್ಲಾಪುರ: ಅನೇಕ ಸಂಘಟನೆಗಳು ಬಹುಕಾಲ ಬಾಳದೇ, ಚೂರು ಚೂರಾಗುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಸಂಘ ಪರಿವಾರದ ಸಂಘಟನೆಗಳು ಅಖಂಡವಾಗಿ ಹಿಂದೂ ಧರ್ಮದ ಸೇವೆ ಮಾಡುತ್ತಿವೆ ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಉಪಾಧ್ಯಕ್ಷ ಗಂಗಾಧರ ಹೆಗಡೆ ಹೇಳಿದರು.
ಪಟ್ಟಣದ ಗ್ರಾಮ ದೇವಿ ದೇವಸ್ಥಾನದಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಸಭೆಯಲ್ಲಿ ಮಾತನಾಡಿದರು. ವಿಶ್ವ ಹಿಂದೂ ಪರಿಷತ್‌ಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ಸಂಘಟನೆಯನ್ನು ಪುನಶ್ಚೇತನಗೊಳಿಸುವುದಲ್ಲದೇ, ಪ್ರತಿ ತಾಲೂಕಿನಲ್ಲಿ ಷಷ್ಠ್ಯಬ್ಧಿ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿರುವ ಹಿನ್ನಲೆಯಲ್ಲಿ ಈ ಸಭೆ ಆಯೋಜಿಸಲಾಗಿದೆ ಎಂದರು.
ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಏಕಾನ ಮಾತನಾಡಿ, ‘ಅರವತ್ತು ವರ್ಷದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಸಮಿತಿ ರಚನೆ ಹಮ್ಮಿಕೊಳ್ಳಲಾಗಿದೆ’ ಎಂದರು
ಜಿಲ್ಲಾ ಕಾರ್ಯದರ್ಶಿ ಗಣಪತಿ ಭಟ್ಟ ಮಂಜಗುಣಿ, ಜಿಲ್ಲಾ ಉಪಾಧ್ಯಕ್ಷ ಕೇಶವ ಮರಾಠೆ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ನಾರಾಯಣ ನಾಯಕ ಸ್ವಾಗತಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಇದೇ ವೇಳೆ ತಾಲೂಕಾ ವಿಶ್ವ ಹಿಂದು ಪರಿಷತ್‌ನ ನೂತನ ಪದಾಧಿಕಾರಿಗಳನ್ನು ಗಂಗಾಧರ ಹೆಗಡೆ ಘೋಷಿಸಿದರು. ನೂತನ ತಾಲೂಕಾ ಅಧ್ಯಕ್ಷರಾಗಿ ಪ.ಪಂ ಮಾಜಿ ಸದಸ್ಯ ಗಜಾನನ ನಾಯ್ಕ ತಳ್ಳಿಕೇರಿ ಆಯ್ಕೆಯಾಗಿದ್ದಾರೆ. ತಾಲೂಕು ಉಪಾಧ್ಯಕ್ಷರಾಗಿ ಗುರು ಭಟ್ಟ ಹಾಸಣಗಿ, ಕಾರ್ಯದರ್ಶಿಯಾಗಿ ವಿಶಾಲ ವಾಳಂಬಿ, ಸಹಕಾರ್ಯದರ್ಶಿಯಾಗಿ ಗಿರೀಶ ಭಾಗ್ವತ್ ಅವರನ್ನು ಆಯ್ಕೆ ಮಾಡಲಾಗಿದೆ. ಮಹಿಳಾ ಪ್ರಮುಖರಾಗಿ ವಿನುತಾ ಭಟ್ಟ, ಸಹ ಪ್ರಮುಖರಾಗಿ ವಿದ್ಯಾ ಭಟ್ಟ, ಸತ್ಸಂಗ ಪ್ರಮುಖರಾಗಿ ರಚನಾ ಭಟ್ಟ, ಸರೋಜಾ ಹೆಗಡೆ, ದುರ್ಗಾವಾಹಿನಿ ಪ್ರಮುಖರಾಗಿ ಮಹಾದೇವಿ ಭಟ್ಟ ನಡಿಗೆಮನೆ, ಸಹ ಪ್ರಮುಖರಾಗಿ ದಮಯಂತಿ ಕವಡಿಕೇರಿ ಆಯ್ಕೆಯಾಗಿದ್ದಾರೆ. ನಗರದ ಅಧ್ಯಕ್ಷರಾಗಿ ಅನಂತ ಗಾಂವ್ಕರ್, ಕಾರ್ಯದರ್ಶಿಯಾಗಿ ಅರುಣ ಶೆಟ್ಟಿ, ಸಹಕಾರ್ಯದರ್ಶಿಯಾಗಿ ವಿಜು ಆಚಾರಿ, ಪ್ರಭಾಕರ ನಾಯ್ಕ, ಸತ್ಸಂಗ ಪ್ರಮುಖರಾಗಿ ಕಲ್ಪನಾ ನಾಯ್ಕ ಕಲ್ಮಠ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿ ನಾರಾಯಣ ನಾಯಕ, ಕೋಶಾಧ್ಯಕ್ಷರಾಗಿ ನಾಗರಾಜ ಮದ್ಗುಣಿ ಅಯ್ಕೆಯಾಗಿದ್ದಾರೆ.