ಕುಮಟಾ: ಕುಮಟಾ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯು 10 ದಿನಗಳ ಕೋಳಿ ಸಾಕಣಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಂಗಳವಾರ ಕೋಳಿ ಸಾಕಣಿಕೆ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಭಟ್ಕಳ ಪಶುವೈದ್ಯ ಶಿವಕುಮಾರ ಎಂ.ಬಿ ಉದ್ಘಾಟಿಸಿ ಮಾತನಾಡಿ, ಇಂದಿನ ದಿನದಲ್ಲಿ ಯುವಕ ಯುವತಿಯರು ಕೃಷಿ ಚಟುವಟಿಕೆಯತ್ತ ಆಸಕ್ತಿ ತೋರಿಸುತ್ತಿದ್ದಾರೆ. ಅಲ್ಲದೆ, ಇತ್ತೀಚಿನ ದಿನದಲ್ಲಿ ಕೋಳಿ ಸಾಕಾಣಿಕೆಗೆ ಅಪಾರವಾದ ಬೇಡಿಕೆಯಿದೆ. ನಾವು ಮಾಡುವ ಉದ್ಯೋಗದಲ್ಲಿ ನಂಬಿಕೆ ಮತ್ತು ಆಸಕ್ತಿಯಿರಬೇಕು, ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೋಳ್ಳಿ ಎಂದು ತಿಳಿಸಿದರು.
ತರಬೇತಿ ಸ್ವಂಸ್ಥೆಯ ನಿರ್ದೆಶಕ ರಾಜು ಕಲ್ಲಪ್ಪ ಸ್ವಾಗತಿಸಿ ಮಾತನಾಡಿ ಸ್ವ ಉದ್ಯೋಗ ಶ್ರೇಷ್ಠ ಉದ್ಯೋಗ, 10 ದಿನಗಳ ಕೋಳಿ ಸಾಕಣಿಕೆ ತರಬೆತಿಯಲ್ಲಿ ಪಾಲ್ಗೊಂಡು, ಕಲಿತ ವಿಷಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸ್ವಂತ ಉದ್ಯೋಗ ಮಾಡುವುದರ ಮೂಲಕ ಒಳ್ಳೆಯ ಯಶಸ್ವಿ ಉದ್ಯಮಿಗಳಾಗಬೇಕೆಂದು ತಿಳಿಸಿದರು.
ಸ್ವಂಸ್ಥೆಯ ಉಪನ್ಯಾಸಕಿ ಮಮತಾ ನಾಯ್ಕ ವಂದಿಸಿದರು, ಸಂಸ್ಥೆಯ ಉಪನ್ಯಾಸಕ ಗೌರೀಶ ನಾಯ್ಕ. 35 ಜನ ಯುವಕ ಯುವತಿಯರು ಪಾಲ್ಗೊಂಡು ತರಬೇತಿಯಲ್ಲಿ ಪಾಲ್ಗೊಂಡಿದ್ದರು.