Slide
Slide
Slide
previous arrow
next arrow

ಘನತ್ಯಾಜ್ಯ ಸಂಗ್ರಹಣೆ, ವಿಲೇವಾರಿ, ನಿರ್ವಹಣೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಮೂಲ್ಯ

300x250 AD

ಕಾರವಾರ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಛೇರಿ ವತಿಯಿಂದ ಕಾರವಾರ ನಗರಸಭೆ ಸಭಾಂಗಣದಲ್ಲಿ ಪೌರಕಾರ್ಮಿಕರಿಗೆ ಘನತ್ಯಾಜ್ಯ ನಿರ್ವಹಣಾ ನಿಯಮಾವಳಿಗಳು 2016 ಹಾಗೂ ಕಟ್ಟಡ ತ್ಯಾಜ್ಯ ನಿರ್ವಹಣೆ ನಿಯಮಾವಳಿಗಳು 2016 ಕುರಿತ ಕಾರ್ಯಾಗಾರವನ್ನು ಸೋಮವಾರ ಹಮ್ಮಿಕೊಳ್ಳಲಾಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ ಹಾಗೂ ಉಪ ಪರಿಸರ ಅಧಿಕಾರಿ, ಡಾ. ಗಣಪತಿ ಹೆಗಡೆ, ಹಾಜರಿದ್ದು, ಪೌರಕಾರ್ಮಿಕರು ಮತ್ತು ನಗರಸಭೆ ಸಿಬ್ಬಂದಿಗಳಿಗೆ ಘನತ್ಯಾಜ್ಯ ಮತ್ತು ಕಟ್ಟಡ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ವೇಳೆಯಲ್ಲಿ ಮಿಶ್ರಿತ ಕಸವನ್ನು ಸಂಗ್ರಹಿಸದೇ, ಹಸಿ ಕಸ (ಆಹಾರ ಪದಾರ್ಥಗಳು, ತರಕಾರಿ ಮತ್ತು ಹಣ್ಣಿನ ಸಿಪ್ಪೆಗಳು ಇತ್ಯಾದಿ ಕೊಳೆಯುವ ವಸ್ತುಗಳು) ಹಾಗೂ ಒಣ ಕಸ (ಬಾಟಲಿಗಳು, ಡಬ್ಬಿಗಳು, ಬಟ್ಟೆ, ಪ್ಲಾಸ್ಟಿಕ್, ಗಾಜು ಲೋಹಗಳು, ಕಾಗದ ಇತ್ಯಾದಿ ಒಣ ವಸ್ತುಗಳು) ವನ್ನು ಪ್ರತ್ಯೇಕವಾಗಿ ಸಂಗ್ರಹಿಸುವಂತೆ ಪೌರಕಾರ್ಮಿಕರಿಗೆ ತಿಳಿಸಿದರು ಹಾಗೂ ಒಂದು ವೇಳೆ ಮಿಶ್ರಿತ ಕಸವನ್ನು ಸಂಗ್ರಹಿಸಿದ್ದಲ್ಲಿ ಅದನ್ನು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪುನಃ ವಿಂಗಡಿಸುವುದು ಮತ್ತು ಇದರಿಂದ ಇರುವ ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಕಷ್ಟಸಾಧ್ಯ ಎಂದು ಮನವರಿಕೆ ಮಾಡಿಕೊಡಲಾಯಿತು. ಒಂದು ವೇಳೆ ಸಾರ್ವಜನಿಕರು ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ನೀಡದಿದ್ದ ಪಕ್ಷದಲ್ಲಿ ಅವರುಗಳಿಗೆ ಜಾಗೃತಿ ಮೂಡಿಸಲು ತಿಳಿಸಿದರು ಹಾಗೂ ಆದಾಗ್ಯೂ, ಪುನಃ ಮಿಶ್ರಿತ ಕಸವನ್ನು ನೀಡಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು.
ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವಲ್ಲಿ ಸಾರ್ವಜನಿಕರ ಪಾಲುದಾರಿಕೆ ಮತ್ತು ಸಹಕಾರ ಅತ್ಯಮೂಲ್ಯವಾದುದು ಆದ್ದರಿಂದ ಈ ಘನತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಕಾರ್ಯದಲ್ಲಿ ಸಾರ್ವಜನಿಕರು ಕೈಜೋಡಿಸುವಂತೆ ಮನವಿ ಮಾಡಲಾಯಿತು. ತಪ್ಪಿದ್ದಲ್ಲಿ ಕಾಯ್ದೆಯಡಿಯಲ್ಲಿ ದಂಡ ವಿಧಿಸಲು ಅವಕಾಶ ಇರುವುದಾಗಿ ತಿಳಿಸಿದರು.
ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರತಿಯೊಬ್ಬ ಪೌರಕಾರ್ಮಿಕರು ಯೋಧರಿದ್ದಂತೆ, ತಾವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ನಗರವನ್ನು ಸುಂದರವಾಗಿಸುವುದರ ಜೊತೆಗೆ ಜನರ ಆರೋಗ್ಯವನ್ನು ಕಾಪಾಡಿದಂತಾಗುತ್ತದೆ ಮತ್ತು ಮಲೇರಿಯಾ, ಡೆಂಗ್ಯೂನಂತಹ ಸೊಳ್ಳೆಯಿಂದ ಉತ್ಪತ್ತಿಯಾಗುವ ರೋಗಗಳನ್ನು ತಡೆಗಟ್ಟಬಹುದಾಗಿದೆ ಎಂದು ಪೌರಕಾರ್ಮಿಕರ ಕೊಡುಗೆಯನ್ನು ಶ್ಲಾಘಿಸಲಾಯಿತು ಹಾಗೂ ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.
ಕಾರ್ಯಗಾರದಲ್ಲಿ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸದಾನಂದ ಆರ್.ಸಾಲೆಹಿತ್ತಲ, ಹಿರಿಯ ಆರೋಗ್ಯ ನಿರೀಕ್ಷಕ ಯಾಕುಬ ಶೇಖ, ಲೆಕ್ಕಪಾಲಕ ಮಂಜುನಾಥ ಹಾಗೂ ನಗರಸಭೆಯ ಪೌರಕಾರ್ಮಿಕರು ಮತ್ತು ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD

Share This
300x250 AD
300x250 AD
300x250 AD
Back to top