Slide
Slide
Slide
previous arrow
next arrow

ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

300x250 AD

ಶಿರಸಿ : ಇಲ್ಲಿಯ ರಾಘವೇಂದ್ರ ಸರ್ಕಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಇಂಟೆಕ್ ವಿಭಾಗದ ವತಿಯಿಂದ ಕೇಂದ್ರ ಸರಕಾರವು ಕರ್ನಾಟಕಕ್ಕೆ ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿರುವ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆಯನ್ನು ಮಾಡಲಾಯಿತು.

ಈ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿ ಇಂಟೆಕ್ ವಿಭಾಗದ ಜಿಲ್ಲಾಧ್ಯಕ್ಷ ಪ್ರೋ.ಎನ್. ಟಿ. ನಾಯ್ಕ, ಜಿಲ್ಲೆಯಲ್ಲಿ ನೆರೆಹಾವಳಿಯಾಗಿ ಸಂಕಷ್ಟದಲ್ಲಿರುವಾಗ ಬಿ.ಜೆ.ಪಿ. ರಾಜ್ಯಾಧ್ಯಕ್ಷ ವಿಜಯೇಂದ್ರ ಜಿಲ್ಲೆಗೆ ಆಗಮಿಸಿದಾಗ ಬಿ.ಜೆ.ಪಿಯವರು ಸಂಭ್ರಮ ಆಚರಿಸಿರುವುದು ನೋವಿನ ಸಂಗತಿ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಇಂಟೆಕ್ ವಿಭಾಗದ ಉಪಾಧ್ಯಕ್ಷ ರಾಮಚಂದ್ರ ರಾಯ್ಕರ ಹಿತ್ಲಳ್ಳಿ ಶಿರಸಿ ಬ್ಲಾಕ್ ಇಂಟೆಕ್ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ ಸಿದ್ದಾಪುರ ಅಧ್ಯಕ್ಷ ವಿನಾಯಕ ನಾಯ್ಕ, ಸಿದ್ದಾಪುರ ಮಹಿಳಾ ಅಧ್ಯಕ್ಷೆ ಮಾನಿಕಾ ಶೆಟ್ಟಿ, ಪಾಂಡುರAಗ ಪಾಟೀಲ್, ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ಕಾಂಗ್ರೆಸ್ ಇಂಟೆಕ್ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

300x250 AD

Share This
300x250 AD
300x250 AD
300x250 AD
Back to top