Slide
Slide
Slide
previous arrow
next arrow

ಪತ್ರಕರ್ತರ‌ ಜೊತೆ ಸದಾ ನಿಲ್ಲುತ್ತೇನೆ: ಬಸವರಾಜ್ ಪಾಟೀಲ್

300x250 AD

ಜೋಯಿಡಾ: ನಾನು ಎಂದಿಗೂ ನಮ್ಮ ಪತ್ರಕರ್ತರ ಪರವಾಗಿ ಇದ್ದೇನೆ. ನಮ್ಮ ಜಿಲ್ಲೆಯ ಯಾವೊಬ್ಬ ಪತ್ರಕರ್ತನಿಗೆ ತೊಂದರೆಯಾದರೂ ನಾನು ಜೊತೆಯಾಗಿ ನಿಲ್ಲುತ್ತೇನೆ ಎಂದು ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಂಘದ ಪ್ರತಿನಿಧಿ ಬಸವರಾಜ ವಿ. ಪಾಟೀಲ್ ಹೇಳಿದರು.                                           
ಅವರು ಅಣಶಿಯಲ್ಲಿ  ಜೋಯಿಡಾ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡುತ್ತಾ ಜೋಯಿಡಾದಂತಹ ಹಿಂದುಳಿದ ತಾಲೂಕಿನಲ್ಲಿ ಪತ್ರಕರ್ತರು ಕಷ್ಟದ ಜೀವನ ನಡೆಸುತ್ತಿದ್ದು,ವಿದ್ಯುತ್ ವ್ಯತ್ಯಯ,ನೆಟ್ವರ್ಕ್ ಸಮಸ್ಯೆ ಮಧ್ಯೆಯೂ ಉತ್ತಮ ಸಮಾಜಮುಖಿ ವರದಿಗಳನ್ನು ಮಾಡುತ್ತಾ ಬಂದಿದ್ದು ಸರ್ಕಾರ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಲಿ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯ ಮಟ್ಟದ ಉತ್ತಮ ಶಿಕ್ಷಕಿ ಪುರಸ್ಕಾರ ಪಡೆದ ಅಣಶಿ ಶಾಲೆಯ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ,ನಿವೃತ್ತ ಸೈನಿಕ ಅಪ್ಪಾ ಕಾಡಪೊಡಕರ, ನಾಟಿ ವೈದ್ಯೆ ರಾಧಿಕಾ ಗಾವಡಾ ಇವರನ್ನು ಸನ್ಮಾನಿಸಲಾಯಿತು.    ಪ್ರಾಸ್ತಾವಿಕವಾಗಿ ಮಾತನಾಡಿದ ಪತ್ರಕರ್ತರು,ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ ಮಾತನಾಡಿ ಜೋಯಿಡಾ ತಾಲೂಕಿನ ಪತ್ರಕರ್ತರ ಕಷ್ಟಗಳಿಗೆ ಅಧಿಕಾರಿಗಳಿಂದ ಸ್ಪಂದನೆ ಸಿಗಬೇಕು ಎಂದು ಹೇಳಿದರು.

ಸನ್ಮಾನಿತರ ಪರವಾಗಿ ಶಿಕ್ಷಕಿ ಅಕ್ಷತಾಕೃಷ್ಣ ಮೂರ್ತಿ ಮಾತನಾಡುತ್ತಾ ನಮ್ಮ ಅಣಶಿ ಶಾಲೆಗೆ ಬಂದು ನನ್ನನ್ನು ಸನ್ಮಾನ ಮಾಡಿದ್ದಕ್ಕೆ ತುಂಬಾ ಸಂತಸವಾಗಿದೆ. ಜೋಯಿಡಾ ತಾಲೂಕಿನಲ್ಲಿ ಕೆಲಸ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ.ಆದರೆ ಒಮ್ಮೆಯಾದರೂ ಇಲ್ಲಿ ಕೆಲಸ ಮಾಡುವದರಿಂದ ಇಲ್ಲಿಯ ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸದರೆ ನಾವು ಸರ್ಕಾರಿ ಸೇವೆಗೆ ಸೇರಿದ್ದು ಸಾರ್ಥಕ ಎಂಬ ಭಾವನೆ ಸಿಗುತ್ತದೆ.ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ದಿ ಆಗಲಿ ಎಂದು ಹೇಳಿದರು. 

300x250 AD

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ದೇಸಾಯಿ ಮಾತನಾಡಿ ಪತ್ರಿಕೆ ಏಕೆ ಓದಬೇಕು,ಹಿಂದೆ ಪತ್ರಕರ್ತರು ಸುದ್ದಿ ಮಾಡಲು ಅನುಭವಿಸಿದ ಕಷ್ಟದ ದಿನಗಳು,ಅವರ ಜೀವನದ ಕುರಿತು ವಿವರವಾಗಿ ತಿಳಿಸಿದರು. ಪತ್ರಿಕಾದಿನದ ಅಂಗವಾಗಿ ಶಾಲೆಗೆ ಗಡಿಯಾರ ಮತ್ತು ಮಕ್ಕಳಿಗೆ ಪೆನ್ನನ್ನು ನೀಡಲಾಯಿತು. ಗ್ರಾಮ ಪಂಚಾಯತ ಉಪಾಧ್ಯಕ್ಷ ಅರುಣ ನಾಯ್ಕ, ಹಿರಿಯ ಪತ್ರಕರ್ತ,ಜಿಲ್ಲಾ ಸಮಿತಿ ಸದಸ್ಯ ಅನಂತ ದೇಸಾಯಿ ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಪುಷ್ಪಾ ವೇಳಿಪ,ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ವಿನೋದ ನಾಯ್ಕ,ಪತ್ರಕರ್ತರಾದ ಹರೀಶ ಭಟ್ಟ, ಟಿ.ಕೆ. ದೇಸಾಯಿ, ತಿಲಕರಾಜ್ ಗಾಂವಕರ ಇತರರು ಇದ್ದರು.ಕಾರ್ಯಕ್ರಮವನ್ನು ಶಿಕ್ಷಕ ವಿಷ್ಣು ಪಟಗಾರ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top