ಸಿದ್ದಾಪುರ: ಪಟ್ಟಣದ ವಿವಿಧಕಡೆಗಳಲ್ಲಿ ಪ್ರಕೃತಿ ವಿಕೋಪದಿಂದ ಹಾನಿ ಸಂಭವಿಸಿದ ಸ್ಥಳಕ್ಕೆ ಸ್ಥಳೀಯ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಭರತಚಂದ್ರ ಕೆ.ಎಸ್. ಭೇಟಿ ನೀಡಿ ಪರಿಶೀಲಿಸಿದರು.
ಹಾಳದಕ್ಕಾದ ಜಾಫರ್ ಇಸೂಬ್ ಸಾಬ್, ಕನಕದಾಸ ಗಲ್ಲಿಯ ಜಟ್ಯಾ ಗಣಪತಿ ಅಂಬಿಗ, ಹೊಸೂರು ಎಲ್.ಬಿ.ನಗರದ ಲಕ್ಷ್ಮಿ ವೆಂಕಟೇಶ ಅಂಬಿಗ, ರವೀಂದ್ರ ನಗರದ ಶ್ರೀಕಾಂತ ದಾಮೋಧರ ಬಟ್ಟಿ ಹಾಗೂ ಸರೋಜಾ ಮಾಣಿಕ್ಯ ಸ್ವಾಮಿ ಅವರ ಮನೆಗೆ ಭೇಟಿ ನೀಡಿ ತಹಸೀಲ್ದಾರ ಎಂ.ಆರ್.ಕುಲಕರ್ಣಿ ಅವರೊಂದಿಗೆ ಹಾನಿಯ ಮಾಹಿತಿ ಪಡೆದುಕೊಂಡರು.
ಪಪಂ ಮುಖ್ಯಾಧಿಕಾರಿ ಜೆ.ಆರ್.ನಾಯ್ಕ ಇಂಜಿನಿಯರ್ ರಮೇಶ ನಾಯ್ಕ, ಸ್ಥಳೀಯ ಗ್ರಾಮಲೆಕ್ಕಾಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳಿದ್ದರು.