Slide
Slide
Slide
previous arrow
next arrow

ಸಿದ್ದಾಪುರದಲ್ಲಿ 2621ಮಿ.ಮೀ.ದಾಖಲೆ ಮಳೆ

300x250 AD

ಸಿದ್ದಾಪುರ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ವಾಡಿಕೆ ಮಳೆಗಿಂತ ಶೇ.50ರಷ್ಟು ಹೆಚ್ಚಾಗಿದೆ. ವಾಡಿಕೆ ಮಳೆ 1650ಮಿ.ಮಿ. ಆಗಬೇಕಾಗಿದ್ದು 2621ಮಿಮಿ ಮಳೆ ಬಿದ್ದು ದಾಖಲಾಗಿದೆ.
ಮಳೆಯಿಂದಾಗಿ ಬಿಳಗಿ ಗ್ರಾಪಂ ವ್ಯಾಪ್ತಿಯ ಕಟ್ಟೆಕೈ ಗ್ರಾಮದ ಕಲ್ಗುಬಳ್ಳಿಗೆ ತೆರಳುವ ಗ್ರಾಮೀಣ ರಸ್ತೆ ಕೊಚ್ಚಿಕೊಂಡು ಹೋಗಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿದೆ. ನಾಗರಬಾವಿಯ ಇಬ್ರಾಹಿಂ ಪೀರ್ ಸಾಬ್ ಅವರ ಮನೆ ಸಂಪೂರ್ಣ ಕುಸಿದು ಬಿದ್ದಿದೆ. ಹೆಗ್ಗರಣಿ ಗ್ರಾಪಂ ವ್ಯಾಪ್ತಿಯ ಉಂಚಳ್ಳಿಯ ಸವಿತಾ ನಾಗು ಮುಕ್ರಿ ಇವರ ವಾಸ್ತವ್ಯದ ಮನೆಯ ಗೋಡೆ ಕುಸಿದು ಬಿದ್ದಿದ್ದು ಅವರಿಗೆ ಸ್ಥಳೀಯ ಅವರ ಅಣ್ಣನ ಮನೆಯಲ್ಲಿ ವಾಸ್ತವ್ಯ ಮಾಡಲು ಅಧಿಕಾರಿಗಳು ಸೂಚಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top