Slide
Slide
Slide
previous arrow
next arrow

ಮನೆ ಮೇಲೆ ಬಿದ್ದ ಬೃಹತ್ ಮರ: ಮನೆಮಂದಿಗೆ ಗಂಭೀರ ಗಾಯ

300x250 AD

ಹೊನ್ನಾವರ : ತಾಲೂಕಿನ ಹಳದಿಪುರ ಬಗ್ರಹಣಿಯ ಮನೆಯೊಂದರ ಮೇಲೆ ಬುಧವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಬೃಹತ್ ಗಾತ್ರದ ಆಲದ ಮರ ಬಿದ್ದು ಮನೆಯಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಬಗ್ರಹಣಿಯ ಮಾದೇವಿ ಕೃಷ್ಣ ಗೌಡ ಇವರ ಮನೆಯ ಮೇಲೆ ಆಲದ ಮರ ಬಿದ್ದಿದ್ದು, ಮನೆಯಲ್ಲಿ ವಾಸ್ತವ್ಯ ಇದ್ದ ಕೃಷ್ಣ ಗೌಡ, ಮಾದೇವಿ ಗೌಡ ಮತ್ತು ಇವರ ಮಗ, ಮಗಳಿಗೆ ಪೆಟ್ಟಾಗಿದ್ದು, ಮಾದೇವಿ ಗೌಡ ಇವರಿಗೆ ಕಾಲಿಗೆ ಗಂಭೀರ ಪೆಟ್ಟು ಬಿದಿದ್ದು, ಇವರ ಪತಿ ಮತ್ತು ಮಗಳಿಗೆ ತಲೆಗೆ ಪೆಟ್ಟು ಬಿದ್ದಿದೆ.ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

300x250 AD

ಸ್ಥಳಕ್ಕೆ ತಹಸೀಲ್ದಾರ್ ಮತ್ತು ಸ್ಥಳೀಯ ಗ್ರಾ. ಪಂ. ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This
300x250 AD
300x250 AD
300x250 AD
Back to top