Slide
Slide
Slide
previous arrow
next arrow

ವರ್ತಮಾನದಲ್ಲಿ ಜ್ಞಾನ, ಕೌಶಲ್ಯದಿಂದ ಜಗತ್ತು ಗೆಲ್ಲಲು ಸಾಧ್ಯ: ಡಾ.ಜನಾರ್ಧನ

300x250 AD

ಯಲ್ಲಾಪುರ: ಶಿಕ್ಷಣದ ಜೊತೆಯಲ್ಲಿ ಇಂದಿನ ಕಾಲಮಾನಕ್ಕೆ ತಕ್ಕ ಜ್ಞಾನ ಮತ್ತು ಕೌಶಲ್ಯಗಳಲ್ಲಿ ಕಲಿತು ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ. ಆರ್.ಡಿ.ಜನಾರ್ಧನ ಹೇಳಿದರು.

ಅವರು ಇಲ್ಲಿನ ಅಡಿಕೆ ಭವನದಲ್ಲಿ ಗ್ರೀನ್‌ಕೇರ್ ಸಂಸ್ಥೆ (ರಿ.) ಶಿರಸಿ ಹಾಗೂ ಕ್ರಿಯೇಟಿವ್ ತರಬೇತಿ ಕೇಂದ್ರ ಯಲ್ಲಾಪುರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕೌಶಲ್ಯ ವಿಕಾಸ ಯೋಜನೆಯಡಿ ಉಚಿತ ಬ್ಯೂಟಿಶಿಯನ್ ಹಾಗೂ ಬೇಸಿಕ್ ಫ್ಯಾಶನ್ ಡಿಸೈನಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ವರ್ತಮಾನದಲ್ಲಿ ಉದ್ಯೋಗಿಯಾಗಲು ಬೇಕಾದ ಕೌಶಲ್ಯಗಳನ್ನು ಸ್ವಪ್ರೇರಣೆಯಿಂದ ಪಡೆಯುವ ಅವಶ್ಯಕತೆ ಇದ್ದು ಗ್ರೀನ್‌ಕೇರ್ ಸಂಸ್ಥೆ ಈ ನಿಟ್ಟಿನಲ್ಲಿ ರೂಪಿಸುರುವ ಕೌಶಲ್ಯ ವಿಕಾಸ ಯೋಜನೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಉದ್ಯಮಿಗಳು ಹಾಗೂ ಗ್ರೀನ್‌ಕೇರ್ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ ಮುಳೆ ಮಾತನಾಡಿ, ಜೀವನದಲ್ಲಿ ಯಶಸ್ಸು ಮತ್ತು ಸಂಪತ್ತು ಲಭಿಸಬೇಕಾದರೆ ನಾವು ನೀಡುವ ಸೇವೆಯು ಹಸನ್ಮುಖಿಯಾಗಿರಬೇಕಿದ್ದು ಇದನ್ನು ಎಲ್ಲಾ ಉದ್ಯಮಶೀಲತೆಯಲ್ಲಿ ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ತರಬೇತಿ ವಿದ್ಯಾರ್ಥಿಗಳಿಗೆ ತರಬೇತಿ ಪರಿಕರಗಳ ಕಿಟ್ ವಿತರಿಸಿ ಮಾತನಾಡಿದ ಕೆ.ಎಸ್.ಭಟ್ಟ ಆನಗೋಡ, ಯುವ ಜನತೆ ಉಚಿತ ಕೌಶಲ್ಯಗಳನ್ನು ತಾತ್ಸಾರದಿಂದ ನೋಡದೇ ಪಡೆದ ತರಬೇತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಯಲ್ಲಾಪುರ ಪಟ್ಟಣ ಪಂಚಾಯತ್ ಸಮುದಾಯ ಸಂಘಟನಾಧಿಕಾರಿ ಹೇಮಾವತಿ ಭಟ್ ಮಾತನಾಡಿ ಇಲಾಖೆಯಡಿ ಲಭ್ಯವಿರುವ ಸ್ವಉದ್ಯೋಗ ಯೋಜನೆಗಳ ಕುರಿತು ಮಾಹಿತಿ ನೀಡಿದರು. 

ಕಾರ್ಯಕ್ರಮದ ಮುಖ್ಯ ಅತಿಥಿಯಾದ ಶಿರಸಿಯ ಅಸ್ಮಿತೆ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಿಯಾಜ್ ಸಾಗರ್ ಮಾತನಾಡಿ ಉದ್ಯಮಶೀಲತೆಯನ್ನು ರೂಡಿಸಿಕೊಳ್ಳುವುದಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಗ್ರೀನ್‌ಕೇರ್ ಸಂಸ್ಥೆ ನೀಡುತ್ತಿದ್ದು ತರಬೇತಿಯನ್ನು ಶ್ರದ್ಧೆ ಮತ್ತು ಆಸಕ್ತಿಯಿಂದ ಪಡೆದು ಪ್ರತಿಯೊಬ್ಬರೂ ತಮ್ಮ ಕುಟುಂಬದ ಆದಾಯ ವೃದ್ಧಿಸಿಕೊಳ್ಳುವುದರ ಮೂಲಕ ಪ್ರತಿಫಲ ಪಡೆಯಬೇಕು ಎಂದರು.

300x250 AD

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಆರ್.ಎಂ ಪ್ರಾಸ್ತವಿಕವಾಗಿ ಮಾತನಾಡಿ ಯೋಜನೆಯ ಉದ್ದೇಶ ವಿವರಿಸಿ 45 ದಿನಗಳ ಈ ತರಬೇತಿಯನ್ನು  ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.

ವೇದಿಕೆಯಲ್ಲಿ ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾದ ಆರ್.ವಿ ಹೆಗಡೆ, ಗ್ರೀನ್‌ಕೇರ್ ಸಂಸ್ಥೆಯ ನಿರ್ದೇಶಕರಾದ ಸದಾಶಿವ ಶಿವಯ್ಯನಮಠ, ಗಜಾನನ ಭಟ್ಟ, ಉದಯ ನಾಯ್ಕ, ಉದಯ ಕುಮಾರ ಜಯಪ್ಪನವರ್, ಸಂಕಲ್ಪ ಸಮಗ್ರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಕುಮಾರ ಜಿ. ಪಟಗಾರ ಉಪಸ್ಥಿತರಿದ್ದರು.

ಕ್ರಿಯೇಟಿವ್ ತರಬೇತಿ ಕೇಂದ್ರದ ಶ್ರೀನಿವಾಸ ಎಂ ಮುರ್ಡೇಶ್ವರ ಸ್ವಾಗತಿಸಿದರು, ಗ್ರೀನ್‌ಕೇರ್ ಸಂಸ್ಥೆಯ ಉಪಾಧ್ಯಕ್ಷರಾ ರೋಹಿಣಿ ಸೈಲ್ ವಂದಿಸಿದರು, ಸಂಸ್ಥೆಯ ನಿರ್ದೇಶಕಿ ಆಶಾ ಡಿಸೋಜಾ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top